ADVERTISEMENT

ತಾರತಮ್ಯ ನೀತಿ ಸಲ್ಲದು

ಮಹೇಶ್ ರುದ್ರಗೌಡರ, ವಿಜಾಪುರ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST

ಸೆಪ್ಟೆಂಬರ್ ೧೪, ಹಿಂದಿ ದಿನ ಆಚರಿಸಲಾಗುತ್ತದೆ. ಎಲ್ಲ ರಾಜ್ಯಗಳ ಕೇಂದ್ರ ಸರ್ಕಾರಿ ಕಚೇರಿಗಳಲಿ್ಲ ಆ ಆಚರಣೆ ನಡೆಯುತ್ತದೆ. ಮೊದಲು ಹಿಂದಿ ದಿವಸ ಇದ್ದದ್ದು ಈಗ ಹಿಂದಿ ಸಪ್ತಾಹ, ಹಿಂದಿ ಪಾಕ್ಷಿಕವಾಗಿ ವಿಸ್ತರಣೆಗೊಂಡಿದೆ. ಕೇವಲ ಹಿಂದಿಯೇತರ ಪ್ರದೇಶಗಳಿಗೆ (ತಮಿಳುನಾಡು ಹೊರತುಪಡಿಸಿ!) ಅನ್ವಯ ವಾಗುವಂತೆ ತ್ರಿಭಾಷಾ ಸೂತ್ರ ಮಾಡಿ ಅದರ ಮೂಲಕ ಕಲಿಕೆ, ಉದ್ಯೋಗ, ಗ್ರಾಹಕ ಸೇವೆ, ಮನರಂಜನೆ ಹೀಗೆ ಎಲ್ಲದರಲ್ಲೂ ಹಿಂದಿಯನ್ನು ವ್ಯವಸ್ಥಿತವಾಗಿ ಹೇರಲಾಗುತ್ತಿದೆ.

ಇದರಿಂದ  ಹಿಂದಿಯೇತರ ರಾಜ್ಯಗಳಲ್ಲಿನ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಹಿಂದಿ ಬಲ್ಲವನು ಸುಲಭವಾಗಿ ಕೆಲಸ ಗಿಟ್ಟಿಸಿಕೊಂಡರೆ, ಹಿಂದಿ ಬರದವರು ಪೇಚಾಡುವ ಪರಿಸ್ಥಿತಿ ಉಂಟಾಗಿದೆ.

ಕೇಂದ್ರ ಸರ್ಕಾರ ಇಂಥ   ಹುಳುಕು ಭಾಷಾ ನೀತಿಯನ್ನು ಕೈಬಿಟ್ಟು ಎಲ್ಲರನ್ನೂ ಸಮಾನವಾಗಿ ಕಾಣುವ, ಸಮಾನ ಅವಕಾಶ ಒದಗಿಸುವ ಒಂದು ಭಾಷಾನೀತಿ ರೂಪಿಸುವತ್ತ ಗಮನಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.