ADVERTISEMENT

ತೃತೀಯ ರಂಗದ ಉದ್ದೇಶವೇನು?

ಡಾ.ಮ.ನ.ಜವರಯ್ಯ, ಮೈಸೂರು
Published 18 ಜೂನ್ 2013, 19:59 IST
Last Updated 18 ಜೂನ್ 2013, 19:59 IST

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಎನ್‌ಡಿಎ ಮಿತ್ರಪಕ್ಷಗಳು ಒಡೆದು ಹೋಳಾಗಿ, ಪ್ರತ್ಯೇಕಗೊಂಡು ತಮ್ಮ ಪೂರ್ವದ ಸ್ಥಿತಿಗೆ ಹಿಂದಿರುಗುವ ಸ್ಪಷ್ಟ ಸೂಚನೆಗಳು ಗೋಚರಿಸುತ್ತಿವೆ.

ಎನ್‌ಡಿಎ ಮಿತ್ರಪಕ್ಷಗಳು ಯುಪಿಎ ಸರ್ಕಾರದ ವಿರುದ್ಧ ಸಂಘಟಿತವಾಗಿದ್ದವು ಎಂಬುದು ರಾಜಕೀಯ ಸತ್ಯ. ಈಗ ಅದೇ ಮಿತ್ರಪಕ್ಷಗಳು ಎನ್‌ಡಿಎ ತೊರೆದು ಬೇರೆ ರೀತಿ ಸಂಘಟನೆಗೆ ಸಜ್ಜಾಗುತ್ತಿವೆ.

ಆದರೆ ಯುಪಿಎ, ಎನ್‌ಡಿಎಗೆ ಹೊರತಾದ ಪರ್ಯಾಯ ರಾಜಕೀಯ ರಂಗ ರಚಿಸುವ ಪ್ರಯತ್ನಗಳು ದೇಶದಾದ್ಯಂತ ಸುದ್ದಿಯಾಗುತ್ತಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೂರನೇ ಮಿತ್ರಪಕ್ಷಗಳ ಸಂಘಟನೆಗಾಗಿ ಪ್ರಯತ್ನಿಸುತ್ತಿದ್ದಾರೆ.

ಈ ರೀತಿಯ ಪರ್ಯಾಯ ಕೂಟ ರಚನೆಯ ಹಿಂದೆ ಎರಡು ಅಥವಾ ಮೂರು ಬಲಿಷ್ಠ ಉದ್ದೇಶ ಗಳಿರುವುದನ್ನು ಮರೆಯುವಂತಿಲ್ಲ. ಮೊದಲನೆಯದಾಗಿ, ಮುಂದಿನ ಪ್ರಧಾನಿ ಪಟ್ಟ ಗಳಿಸುವುದು, ಎರಡನೆಯದಾಗಿ, ಬಿಜೆಪಿಯ ಪ್ರಧಾನಿ ಆಕಾಂಕ್ಷಿಗಳಾದ ಅಡ್ವಾಣಿ ಮತ್ತು ನರೇಂದ್ರ ಮೋದಿ ಅವರನ್ನು ಅದೇ ಪ್ರಧಾನಿ ಪಟ್ಟಕ್ಕೆ ಬಾರದಂತೆ ತಡೆಗಟ್ಟುವುದು.

ADVERTISEMENT

ಇನ್ನು ಮೂರನೇ ಉದ್ದೇಶ, ಕಾಂಗ್ರೆಸ್‌ನ ಯಾವ ಅಭ್ಯರ್ಥಿಯೂ ಮುಂದಿನ ಪ್ರಧಾನಿ ಆಗದಂತೆ ತಡೆಗಟ್ಟುವುದು. ಇವೆಲ್ಲ ಏನೇ ಇದ್ದರೂ, ಈ ಬಗ್ಗೆ ದೇಶದ ಮತದಾರರದ್ದೇ ಅಂತಿಮ ನಿರ್ಧಾರ. 
-ಡಾ.ಮ.ನ.ಜವರಯ್ಯ, ಮೈಸೂರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.