ಈ ಬಾರಿಯ ಬಜೆಟ್‌ನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹಾಗೂ ಟಿ.ವಿ. ಕೇಬಲ್ ಶುಲ್ಕ ಏರಿಸುವ ಮೂಲಕ ಮಧ್ಯಮ ವರ್ಗದವರಿಗೆ ಬರೆ ಎಳೆಯಲಾಗಿದೆ. ಮೋಟಾರು ವಾಹನ ತೆರಿಗೆ, ಮೌಲ್ಯವರ್ಧಿತ ತೆರಿಗೆ ಹೆಚ್ಚಳ ಬಹುಸಂಖ್ಯಾತ ವರ್ಗದವರಿಗೆ ಹೆಚ್ಚಿನ ಬಿಸಿ ಮುಟ್ಟಿಸುತ್ತದೆ.
ಶೂನ್ಯ ಬಡ್ಡಿ ದರದೊಂದಿಗೆ ಕೃಷಿ ಸಾಲ ವಿತರಣೆ ಮುಂದುವರಿಸುವುದಾಗಿ ಹೇಳಲಾಗಿದೆ. ಸಾಲ ಶೂಲ ಎಂಬ ಗಾದೆ ಎಂದೂ ಸುಳ್ಳಾಗಿಲ್ಲ. ರೈತರನ್ನು ಸಾಲಗಾರರನ್ನಾಗಿ ಮಾಡಿ ಆತ್ಮಹತ್ಯೆ ಬಾಗಿಲಿಗೆ ತಳ್ಳುವುದಕ್ಕಿಂತ, ನ್ಯಾಯಸಮ್ಮತವಾದ ಬೆಲೆಯಲ್ಲಿ ಕೃಷಿಗೆ ಬೇಕಾದ ಪದಾರ್ಥಗಳನ್ನು ಪೂರೈಸಿದಲ್ಲಿ ರೈತ ಬಹುಮಟ್ಟಿಗೆ ಸ್ವಾವಲಂಬಿಯಾಗಬಹುದು.
ಸಾಲ ಹೊತ್ತವರು ಯಾರೂ ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಯಾರಿಗೂ ಬೇಡವಾದ ತೆರಿಗೆ ಭಾಗ್ಯವಂತೂ ಜನಸಾಮಾನ್ಯನಿಗೆ ಒಲಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.