ನಾವು ಗಂಗಾವತಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಂಶಕಾಲಿಕ (ದಿನಗೂಲಿ) ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ಇಲ್ಲಿ ನಮ್ಮ ವೇತನ ಮೊತ್ತ 2,000 ರೂ. ಆಗಿದ್ದು ಇಂದಿನ ದಿನಗಳಲ್ಲಿ ಬೆಲೆ ಏರಿಕೆ ಪರಿಣಾಮ ಈ ಹಣದಲ್ಲಿ ಕುಟುಂಬದ ಜೀವನ ನಡೆಸಲು ಕಷ್ಟಕರವಾಗಿದೆ. ಇದನ್ನು ವಿರೋಧಿಸಲು ಅಸಹಾಯಕರಾಗಿದ್ದೇವೆ. ಒಂದು ವೇಳೆ ಪ್ರತಿಭಟಿಸಿದರೆ ಒಪ್ಪತ್ತಿನ ಊಟಕ್ಕೂ ಸಹ ಸಂಚಕಾರ ಬರುವ ಸಾಧ್ಯತೆ ಇದೆ.
ಅನುದಾನದ ಕೊರತೆಯಿಂದಾಗಿ ಕೆಲವೊಮ್ಮೆ 6 ತಿಂಗಳವರೆಗೆ ವೇತನವಿಲ್ಲದೆ ಕೆಲಸ ಮಾಡುವ ಪ್ರಸಂಗವು ಇರುತ್ತದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೆ ಮುಖ್ಯಮಂತ್ರಿಗಳು ಹಾಗೂ ಕಾರ್ಮಿಕ ಸಚಿವರು ಈ ಅಂಶಕಾಲಿಕ ನೌಕರರಿಗೆ ಜೀವನ ನಡೆಸಲು ಬೇಕಾಗುವ ಕನಿಷ್ಠ ವೇತನವನ್ನಾದರೂ ನೀಡಬೇಕೆಂದು ಕೋರುತ್ತೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.