ADVERTISEMENT

ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಡಿಸೆಂಬರ್ 2013, 19:30 IST
Last Updated 2 ಡಿಸೆಂಬರ್ 2013, 19:30 IST

ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಹಲವು ವರ್ಷಗಳಿಂದ ಆಗಿಲ್ಲ. ಸಿ.ಪಿ.ಎಡ್‌ ಪೂರೈಸಿದ ಸುಮಾರು 80 ಸಾವಿರದಷ್ಟು  ನಿರುದ್ಯೋಗಿಗಳು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.   ವಯೋಮಿತಿ ಮೀರುವ ಆತಂಕ ಹಲವರದು.

ಈಗ ಚಾಲ್ತಿಯಲ್ಲಿರುವ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರವೇ 2,500 ಹುದ್ದೆಗಳು ಖಾಲಿ ಇವೆ. ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿದರೂ ಪ್ರಯೋಜನ ವಾಗಿಲ್ಲ. 2007ರಲ್ಲಿ 952 ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಸಭೆ  ಅನುಮೋದನೆ ನೀಡಿತ್ತು. ಆ ನೇಮಕಾತಿ ಪ್ರಕ್ರಿಯೆಯೂ  ತಟಸ್ಥವಾಗಿರುವುದು ವಿಷಾದನೀಯ. ಸರ್ಕಾರ ಈಗಲಾದರೂ ಈ ನಿಟ್ಟಿನಲ್ಲಿ ಗಮನ ಹರಿಸಬೇಕು.
–ಎಂ.ಡಿ. ಹೊಟೆಗಾಳಿ, ಭೀಮಾರೆಡ್ಡಿ ಶ್ಯಾಡ್ಲಗೇರಿ,ಅಲ್ಲಾಸಾಬ ಕಟ್ಟಿಮನಿ, ಹೊನ್ನಪ್ಪ, ಹುಬ್ಬಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.