ADVERTISEMENT

ಧಿಕ್ಕಾರ

ಅನ್ನಪೂರ್ಣ ವೆಂಕಟನಂಜಪ್ಪ
Published 19 ಫೆಬ್ರುವರಿ 2016, 19:32 IST
Last Updated 19 ಫೆಬ್ರುವರಿ 2016, 19:32 IST

ಹುತಾತ್ಮ ಯೋಧ ಲ್ಯಾನ್ಸ್ ನಾಯಕ್‌ ಹನುಮಂತಪ್ಪ ಕೊಪ್ಪದ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಪತ್ನಿ ಮಹಾದೇವಿ ಅವರ ತಾಳಿ ಕಿತ್ತು ಬಳೆ ಒಡೆಸಿದ್ದನ್ನು ಟಿ.ವಿ.ಯಲ್ಲಿ ಕಂಡು ತುಂಬಾ ನೋವಾಯಿತು. ಅಲ್ಲಿ ನೂರಾರು ಮಂದಿ ಗಣ್ಯರು, ಮಠಾಧೀಶರು ಇದ್ದಾಗ್ಯೂ ಇಂತಹ ಸನ್ನಿವೇಶ ಉಂಟಾದುದು ದುರ್ದೈವದ ಸಂಗತಿ. ಯೋಧ ಹನುಮಂತಪ್ಪನವರೇ ವಿಧವೆ ಮಹಾದೇವಿ ಅವರನ್ನು ವರಿಸಿದ್ದರು. ಅಂತಹ ಉದಾತ್ತ ವ್ಯಕ್ತಿಯ ಬಾಳ ಸಂಗಾತಿಗೆ ಸಂಪ್ರದಾಯದ ಹೆಸರಿನಲ್ಲಿ ಇದೆಂತಹ ಶಿಕ್ಷೆ? ನೊಂದವರಿಗೆ ಮತ್ತೆ ಮತ್ತೆ ನೋವು ನೀಡುವ ಇಂತಹ ಅನಿಷ್ಟ ಪದ್ಧತಿಗಳಿಗೆ ಧಿಕ್ಕಾರ!

ತುಮಕೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT