
ನಾಡಗೀತೆಯು ನಾಡಿನ ಭಾಷೆ, ವಿವಿಧ ಸಂಸ್ಕೃತಿ, ಐತಿಹಾಸಿಕ ಸಾಧನೆ ಹಾಗೂ ನೈಸರ್ಗಿಕ ಸಿರಿಯನ್ನು ಕೊಂಡಾಡುವುದೂ, ನಮ್ಮ ನಾಡಿಗಷ್ಟೇ ಅಲ್ಲದೇ ಮಾನವ ಕುಲಕ್ಕೇ ಮಹೋನ್ನತ ಕೊಡುಗೆಗಳನ್ನಿತ್ತ ನಾಡಿನ ಹೆಮ್ಮೆಯ ಮಕ್ಕಳನ್ನು ಹೆಸರಿಸುತ್ತ ಪ್ರಜೆಗಳಿಗೆ ಸ್ಫೂರ್ತಿದಾಯಕವೂ ಏಕತೆಯ ಸಂಕೇತವೂ ಆಗಿರುತ್ತದೆ.
ಮಹಿಳೆಯರು ಜನಸಂಖ್ಯೆಯ ಅರ್ಧದಷ್ಟಿದ್ದಾರೆ. ಆದರೆ, ಕನ್ನಡ – ನಾಡಗೀತೆಯಲ್ಲಿ ಒಟ್ಟು 27 ವ್ಯಕ್ತಿಗಳನ್ನು ಹೆಸರಿಸಲಾಗಿದ್ದರೂ ಒಬ್ಬ ಮಹಿಳೆಯ ಹೆಸರೂ ಇಲ್ಲ! ಒಂದು ಕವಿತೆಯಾಗಿ ನೋಡಿದಾಗ ಕವಿಗೆ ಸಂಪೂರ್ಣ ಸ್ವಾತಂತ್ರ್ಯವಿದ್ದರೂ ನಾಡಗೀತೆಯಾಗಿ ನೋಡಿದಾಗ ಯಾವ ವೀರ ಮಹಿಳೆಯ ಅಥವಾ ದಾರ್ಶನಿಕಳ ಅಥವಾ ಕವಯಿತ್ರಿಯ ಪ್ರಸ್ತಾಪವೇ ಬಾರದಿರುವುದು ಸರಿ ಎನಿಸದು.
ನದಿಗಳ ಹೆಸರು, ‘ಮಾತೆ’ ಮೊದಲಾದ ಸ್ತ್ರೀಲಿಂಗದ ಪದಗಳಷ್ಟೇ ಕರ್ನಾಟಕದ ವೀರ– ಧನ್ಯ ಮಹಿಳೆಯರ ಸಾಧನೆಗಳಿಗೆ ಪ್ರತಿನಿಧಿಗಳಾಗಲಾರವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.