ADVERTISEMENT

ನಾಣ್ಯಗಳಿಗೆ ರಕ್ಷಣೆ ಬೇಕು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ಇತ್ತೀಚೆಗಷ್ಟೆ ಚಲಾವಣೆಗೆ ಬಂದಿರುವ ಬಂಗಾರ ಬಣ್ಣದ ಐದು ರೂಪಾಯಿ ನಾಣ್ಯಗಳು ಕಣ್ಮರೆಯಾಗುತ್ತಿವೆ. ಹಳೆಯ ಒಂದು ಹಾಗೂ ಎರಡು ರೂಪಾಯಿ ನಾಣ್ಯಗಳೂ ಕಣ್ಮರೆಯಾಗುತ್ತಿವೆ. ಈ ನಾಣ್ಯಗಳನ್ನು ಕರಗಿಸಿ ಬಳೆ, ಉಂಗುರ, ಚೈನ್ ಮುಂತಾದ ಆಭರಣಗಳನ್ನು ತಯಾರಿಸುತ್ತಾರೆಂಬ ವದಂತಿ ಇದೆ.

ಆದ್ದರಿಂದ ಸಂಬಂಧಪಟ್ಟವರು ನಾಣ್ಯ ಕರಗಿಸಿ ಆಭರಣ ತಯಾರಿಸುವವರು ಮತ್ತು ಧರಿಸುವವರ ವಿರುದ್ಧ ಬಿಗಿ ಕ್ರಮ ಕೈಗೊಂಡು ನಾಣ್ಯಗಳ ದುರ್ಬಳಕೆ ತಡೆಯಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT