
ಬೆಂಗಳೂರು–ಹೊಸೂರು ಮುಖ್ಯ ರಸ್ತೆಯ ಕಿದ್ವಾಯಿ ಆಸ್ಪತ್ರೆಯ ಪಕ್ಕದಲ್ಲಿನ ಧರ್ಮಾರಾಂ ಕಾಲೇಜು ಅಂಚೆ ಕಚೇರಿಗೆ ಹೊಂದಿಕೊಂಡಂತೆ ಆರ್‌ವಿಟಿಐನ ಮುಂಭಾಗದ ರಸ್ತೆಯ ಮೋರಿಯ ಪಕ್ಕದಲ್ಲಿ ಸುಮಾರು ತಿಂಗಳಿನಿಂದ ನೀರಿನ ಪೈಪು ಒಡೆದಿದ್ದು, ಸಾಕಷ್ಟು ನೀರು ಪ್ರತಿದಿನ ಪೋಲಾಗುತ್ತಿದೆ. ಜಲಮಂಡಳಿಯವರು ಇತ್ತ ಗಮನ ಹರಿಸಿದಂತಿಲ್ಲ. ಈಗಲಾದರೂ ಒಡೆದಿರುವ ಪೈಪಿನ ದುರಸ್ತಿ ಮಾಡುವುದರ ಮೂಲಕ ನೀರಿನ ಪೋಲು ತಪ್ಪಿಸಬೇಕೆಂದು ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.