ADVERTISEMENT

‘ಪತಿ–ಪತ್ನಿ’ ಜಗಳದಲ್ಲಿ...

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 17:12 IST
Last Updated 18 ಜೂನ್ 2018, 17:12 IST

‘ಪತಿ–ಪತ್ನಿ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಗಾದೆಮಾತು ವರ್ಗಾವಣೆಗಾಗಿ ಚಾತಕಪಕ್ಷಿಯಂತೆ ಕಾಯುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಅಕ್ಷರಶಃ ಒಪ್ಪುತ್ತದೆ.

ರಾಜಕೀಯ ತೊಳಲಾಟದಲ್ಲಿ ಮುಳುಗಿರುವ ಸರ್ಕಾರಕ್ಕೆ, ವರ್ಗಾವಣೆಯ ನೆನಪು ಇದ್ದಂತಿಲ್ಲ. ಮಾತೆತ್ತಿದರೆ ‘ಗುಣಾತ್ಮಕ ಶಿಕ್ಷಣ ನಮ್ಮ ಗುರಿ’ ಎನ್ನುವ ಸರ್ಕಾರವು ಗುಣಾತ್ಮಕ ಶಿಕ್ಷಣಕ್ಕೆ ಪ್ರಮುಖ ಕಾರಣರಾಗಿರುವ ಶಿಕ್ಷಕರಿಗೆ ವರ್ಗಾವಣೆಯ ಅವಕಾಶ ಕಲ್ಪಿಸದೇ ಸತಾಯಿಸುತ್ತಿರುವುದು ಅನ್ಯಾಯದ ಪರಮಾವಧಿಯೇ ಸರಿ. ವರ್ಗಾವಣೆ ಮಾಡುವ ಇರಾದೆ ಇಲ್ಲದಿದ್ದರೆ ನೇರವಾಗಿ ಹೇಳಿದರೆ ಎಲ್ಲರೂ ನೆಮ್ಮದಿಯಿಂದಾದರೂ ಇರುತ್ತಾರೆ.

ಶಿಕ್ಷಕರಿಗೂ ಹೆಂಡತಿ- ಮಕ್ಕಳು, ಬಂಧು– ಬಳಗವಿದ್ದು ದಯವಿಟ್ಟು ಆದಷ್ಟು ಬೇಗ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು.
–ಜಿ.ಪಿ. ಬಿರಾದಾರ, ಮುಳಸಾವಳಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.