
ಪ್ರಜಾವಾಣಿ ವಾರ್ತೆಕೆಲವು ಪತ್ರಕರ್ತರ ಭ್ರಷ್ಟಾಚಾರದ ಬಗ್ಗೆಯೂ ತನಿಖೆ ನಡೆಸಬೇಕು ಅನ್ನುವ ಸಚಿವ ರೇಣುಕಾಚಾರ್ಯ ಆಗ್ರಹ ಸಮರ್ಥನೀಯ. ಒಂದೆಡೆ ರಾಜಕಾರಣಿಗಳ ಮತ್ತು ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳು ರಣ ದುಂದುಬಿ ಮೊಳಗಿಸಿದ್ದರೆ, ಇನ್ನೊಂದೆಡೆ ಕೆಲ ಪತ್ರಕರ್ತರು ಗಣಿಧೂಳಿನಿಂದಲೇ ಕೋಟ್ಯಧೀಶರಾಗಿದ್ದಾರೆ.
ಭ್ರಷ್ಟಾಚಾರದ ವಿರುದ್ಧದ ಮಾಧ್ಯಮ ಹೋರಾಟವನ್ನೇ ಈ ಪತ್ರಕರ್ತರು ದುರುಪಯೋಗಪಡಿಸಿಕೊಂಡಿದ್ದಾರೆ. ಕೆಲ ಪತ್ರಕರ್ತರ ಹೆಸರು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖ ಗೊಂಡಿರುವುದಾಗಿ ಹೇಳಲಾಗುತ್ತಿದೆ. ಸರ್ಕಾರ ಪತ್ರಕರ್ತರು ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಹಣಗಳಿಕೆಗೆ ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಲು ತನಿಖೆಗೆ ಆದೇಶಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.