ADVERTISEMENT

ಪದವಿ ಉಪನ್ಯಾಸಕರ ನೇಮಕಾತಿ ಯಾವಾಗ?

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 19:30 IST
Last Updated 18 ಜೂನ್ 2012, 19:30 IST

ಪದವಿ ಉಪನ್ಯಾಸಕರ 1500 ಹುದ್ದೆಗಳು ಖಾಲಿ ಇವೆ ಎಂದು ಹೇಳುತ್ತಾ ಬಂದಿರುವ ಸರ್ಕಾರ ಹಾಗೂ ಕೆ.ಪಿ.ಎಸ್.ಸಿ, ಹುದ್ದೆಗಳನ್ನು ತುಂಬುವ ಗೋಜಿಗೆ ಹೋಗದಿರುವುದು ವಿಷಾದಕರ.

ಪದವಿಪೂರ್ವ ಉಪನ್ಯಾಸಕರ ಹುದ್ದೆಗೆ ಮಾತ್ರ ಅಧಿಸೂಚನೆ ಹೊರಡಿಸಿದ್ದು ಪದವಿ ಉಪನ್ಯಾಸಕರ ಹುದ್ದೆಗೆ ಯಾವುದೇ ಅಧಿಸೂಚನೆ ಇಲ್ಲದಿರುವುದು, ಪಿ.ಎಚ್‌ಡಿ, ಎಂ.ಫಿಲ್, ಎನ್.ಇ.ಟಿ, ಎಸ್.ಎಲ್.ಇ.ಟಿ. ಪಾಸಾದ ಹಾಗೂ ವಯೋಮಿತಿ ಮೀರುತ್ತಿರುವ ಸಾವಿರಾರು ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ.

ಹಾಗಾಗಿ ಸರ್ಕಾರ ಇದನ್ನು ಪರಿಗಣಿಸಿ, ಪದವಿಪೂರ್ವ ಉಪನ್ಯಾಸಕರ ನೇಮಕ ಪ್ರಕ್ರಿಯೆಯ ಮಾದರಿಯಲ್ಲೇ  ಪದವಿ ಉಪನ್ಯಾಸಕರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಪದವಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಬೇಕೆಂದು ವಿನಂತಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.