ADVERTISEMENT

ಪರಿಣಾಮ ಬೀರದ ಎಚ್ಚರಿಕೆ

ಕೆ.ವಿ.ಸೀತಾರಾಮಯ್ಯ, ಹಾಸನ
Published 29 ಮೇ 2015, 19:30 IST
Last Updated 29 ಮೇ 2015, 19:30 IST

ದೇಶದಲ್ಲಿ ಬಾಯಿ ಕ್ಯಾನ್ಸರ್‌ ಪ್ರಮಾಣ (1990ರಿಂದ 2013ರ ನಡುವೆ) ಶೇಕಡ 130ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ವಿವಿಧ ರೂಪಗಳಲ್ಲಿ ತಂಬಾಕು ಬಳಸುವುದರ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿಕೊಂಡೇ ಬಂದಿದ್ದರೂ ಅದರ ಬಳಕೆ ಪ್ರಮಾಣ ಗಣನೀಯವಾಗಿ ತಗ್ಗಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಅಂದರೆ ಜನರು ಆ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ!

ತಂಬಾಕು ಬಳಕೆ ಕ್ಯಾನ್ಸರ್‌ಗೆ ಕಾರಣವಾಗುವ ಸಾಧ್ಯತೆ ಹೆಚ್ಚು ಎಂಬುದು ಎಲ್ಲರಿಗೂ ಗೊತ್ತು.  ಆದರೆ ತಂಬಾಕು ಸೇವಿಸುವವರು ತಮ್ಮ ಪ್ರಾಣಕ್ಕೂ ಅಂಜದೆ ಇದ್ದಷ್ಟು ದಿನ ಅದರಿಂದ ದೊರಕುವ ಸಂತೋಷವನ್ನು ಅನುಭವಿಸಿಯೇ ಬಿಡೋಣ ಎಂಬ ನಿರ್ಧಾರಕ್ಕೆ ಬಂದಂತಿದೆ. 

ಸೂಚನೆ, ಎಚ್ಚರಿಕೆ, ತಿಳಿವಳಿಕೆ ಮೂಡಿಸುವ ಪ್ರಯತ್ನಗಳು ತಂಬಾಕು ಬಳಕೆಯಿಂದ ಬರುವ ರೋಗಗಳ ಪ್ರಮಾಣವನ್ನು  ತಗ್ಗಿಸಿದ್ದರೆ ಸಮಾಧಾನವಿರುತ್ತಿತ್ತು.  ಆದರೆ ಅದು ಆಗಿಲ್ಲ ಎಂಬುದು ವಿಷಾದದ ಸಂಗತಿ. ಬಳಕೆಗೆ ಅವಕಾಶ ಕೊಟ್ಟು, ಅದರ ದುಷ್ಪರಿಣಾಮದ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದರೆ ಆಗುವ ಪ್ರಯೋಜನವಾದರೂ ಏನು?

ಜನರ ಆರೋಗ್ಯವರ್ಧನೆಗೆ ಹೆಚ್ಚಿನ ಗಮನ ನೀಡಲೇಬೇಕು  ಎಂಬುದು ಉನ್ನತ ಮಟ್ಟದಲ್ಲಿರುವವರ ಮನಸ್ಸಿಗೆ ಗಟ್ಟಿಯಾಗಿ ಬಂದಲ್ಲಿ ದುಷ್ಪರಿಣಾಮಗಳಿಗೆ ಕಾರಣವಾಗುವ  ಸರಕು ಮತ್ತು ಸೇವೆಗಳ ವಿರುದ್ಧ ಇನ್ನೂ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.