ADVERTISEMENT

ಪರಿಸರ ಪ್ರಿಯರಿಗೆ ಹರ್ಷ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST

ಪಶ್ಚಿಮ ಘಟ್ಟದ ಅರಣ್ಯವನ್ನು ಯುನೆಸ್ಕೋದ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿರುವುದು ಪರಿಸರಪ್ರಿಯರಿಗೆ ಸಂತಸದ ವಿಷಯ. ಕರ್ನಾಟಕದಲ್ಲಿಯೂ ಪಸರಿಸಿರುವ ಪಶ್ಚಿಮಘಟ್ಟ, ವಿಶ್ವ ಭೂಪಟದಲ್ಲಿ  ಗುರುತಿಸಲ್ಪಡುವುದು ನಮಗೆ ಹೆಮ್ಮೆ. 

ಇಷ್ಟೊಂದು ಸಮೃದ್ಧ ಕಾಡು ಬಹುಶಃ ಭಾರತದಲ್ಲಿ ಎಲ್ಲಿಯೂ ಇಲ್ಲವೆಂಬುದು ನನ್ನ ಭಾವನೆ. ಪ್ರಾಣಿ ಪಕ್ಷಿಗಳು ಮರ ಗಿಡಗಳು, ಹಾವು ಹಲ್ಲಿಗಳು, ಮೀನು ಏಡಿ ಕಪ್ಪೆಗಳು, ಹುಳಹುಪ್ಪಟೆಗಳ ವೈವಿಧ್ಯತೆಯನ್ನು, ಎಷ್ಟು ಎಣಿಸಿದರೂ ಮುಗಿಯದ ಜೀವಜಂತುಗಳ ತಾಣವಿದು. ಅಳಿವಿನಂಚಿನ  ಪ್ರಾಣಿ ಪಕ್ಷಿಗಳು, ಜೀವ ಜಂತುಗಳು ಇಲ್ಲಿ ಇನ್ನೂ ಬದುಕುಳಿದಿವೆ.

ವರ್ಣಿಸಲಸದಳವಾದ ಈ ಸುಂದರ  ಕಾಡು ಇಡೀ ಭಾರತದಲ್ಲಿ ಬೇರೆಡೆ ಇಲ್ಲ. ಈ ಪ್ರದೇಶದ  ನಿತ್ಯ ಹರಿದ್ವರ್ಣ ಕಾಡು ತನ್ನದೇ ಆದ ವೈಭವ ಹೊಂದಿದೆ.

ಇನ್ನು ಮುಂದಾದರೂ ಈ ಕಾಡಿನೊಳಗೆ ಯಾವುದೇ ಯೊಜನೆಗಳು ನಡೆಯದಿರಲೆಂದು ಆಶಿಸೋಣ. ಇಲ್ಲಿ ಪ್ರಾಣಿಗಳಿಲ್ಲ, ಪ್ರಕೃತಿಗೆ ಹಾನಿಯಿಲ್ಲವೆಂದು ವರದಿ ಮಾಡಿ ಇದುವರೆಗೆ ಕಣ್ಣಿದ್ದೂ ಕುರುಡರಾಗಿ ಎಲ್ಲಾ  ಯೋಜನೆಗಳಿಗೆ ಅವಕಾಶ ಮಾಡಿದ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಇನ್ನಾದರೂ ಕಣ್ಣು ತೆರೆಯಲಿ.

ಈ ಅತ್ಯಮೂಲ್ಯ ಕಾಡನ್ನು ಪರಿಸರದ ದೃಷ್ಟಿಯಿಂದ ಮಾತ್ರವಲ್ಲದೆ ಮುಂದಿನ ಪೀಳಿಗೆಗಾಗಿ ಉಳಿಸೋಣ. ಯುನೆಸ್ಕೋದವರಿಗೆ ಪರಿಸರ ಪ್ರೇಮಿಗಳ ಧನ್ಯವಾದಗಳು !!
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.