ADVERTISEMENT

ಪಾದಚಾರಿ ಮಾರ್ಗಗಳು ಏಕಪ್ರಕಾರವಾಗಿರಲಿ

ಎಚ್.ಸಿ.ಸೌಮ್ಯ ರೆಡ್ಡಿ
Published 5 ಮೇ 2014, 19:30 IST
Last Updated 5 ಮೇ 2014, 19:30 IST

ರಾಜಾಜಿನಗರ ವಿವಿಧ ಬಡಾವಣೆಯ ರಸ್ತೆಯ ಇಕ್ಕೆಲಗಳ ಚರಂಡಿಗೆ ಹಾಸುಕಲ್ಲುಗಳನ್ನು ಒಂದೇ ಸಮನಾಗಿ ಹಾಕಿಲ್ಲ. ಇದರಿಂದ ಪಾದಚಾರಿಗಳಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ.

ಏರುಪೇರಾಗಿರುವ ಪಾದಚಾರಿ ಮಾರ್ಗದ ಬದಲು ಎಲ್ಲರೂ ರಸ್ತೆಯನ್ನು ಬಳಸುವುದು ಅನಿವಾರ್ಯವಾಗಿದೆ. ಇದರಿಂದಾಗಿ ಮಕ್ಕಳು, ಮಹಿಳೆಯರು, ವಯಸ್ಸಾದವರು ಪಾದಚಾರಿ ಮಾರ್ಗ ಹಾಗೂ ರಸ್ತೆ ಎರಡೂ ಕಡೆ ನಡೆದಾಡದಂಥ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಪಾದಚಾರಿಗಳು ಅಪಘಾತದ ಭೀತಿಯಲ್ಲೇ ನಡೆದಾಡಬೇಕು. ಹೀಗಾಗಿ ಈಗ ಹಾಕಿರುವ ಅವೈಜ್ಞಾನಿಕ ಕಲ್ಲು ಚಪ್ಪಡಿಗಳ ಬದಲು ಸಮತಟ್ಟಾದ ಕಾಂಕ್ರಿಟ್‌ ಹಾಸುಗಳನ್ನು ಹಾಕಬೇಕಾಗಿ ಪಾಲಿಕೆ ಅಧಿಕಾರಿಗಳಲ್ಲಿ ಮನವಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.