ADVERTISEMENT

ಪೆಗ್ ಸವಾರಿ!

ಪತ್ತಂಗಿ ಎಸ್.ಮುರಳಿ
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST

‘ನಿಪ್ಪಾಣಿ– ಮುಧೋಳ ರಸ್ತೆಯಲ್ಲಿ ಎರಡು ಪೆಗ್ ಹಾಕಿ ಕುಳಿತರೂ ನೀವು ಎಲ್ಲಿಗೆ ಹೋಗಬೇಕೋ ಅಲ್ಲಿಗೇ ತಲುಪುತ್ತೀರಿ’ ಎಂದು ಲೋಕೋಪಯೋಗಿ ಸಚಿವರು ಹೇಳಿರುವುದು ವರದಿಯಾಗಿದೆ (ಪ್ರ.ವಾ., ಮಾ. 14).

ಅವರು ಹೇಳಿರುವುದರಲ್ಲಿ ಸುಳ್ಳಿಲ್ಲ. ರಾಜ್ಯದ ಬಹುತೇಕ ರಸ್ತೆಗಳು ಹಳ್ಳ–ದಿನ್ನೆ ಹಾಗೂ ಯಥೇಚ್ಛ ದೂಳು ತುಂಬಿಕೊಂಡು ಪ್ರಯಾಣಿಕರಿಗೆ ನರಕದರ್ಶನ ಮಾಡಿಸುತ್ತಿವೆ. ಎರಡು ಪೆಗ್ ಹಾಕಿ ಸವಾರಿ ಮಾಡಿದರೆ ಮಾತ್ರ ಪ್ರಯಾಣಿಕರು ತಲುಪಬೇಕಾದ ಸ್ಥಳಕ್ಕೆ ತಲುಪಬಹುದು. ಕೊನೆಗೂ ಸತ್ಯ ಹೇಳಿದ ಮಂತ್ರಿಗಳಿಗೆ ‘ಜೈ’ ಅನ್ನೋಣವೇ...?

ಅಂದಹಾಗೆ ಎಲ್ಲ ಸವಾರರಿಗೂ ಸರ್ಕಾರವು ‘ಪೆಗ್ ಭಾಗ್ಯ’ ಕರುಣಿಸುವುದೆಂದು ನಿರೀಕ್ಷಿಸಬಹುದೇ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.