ADVERTISEMENT

ಪೊಲೀಸರು ಮನುಷ್ಯರಲ್ಲವೇ?

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಆರಂಭವಾದ ಆರು ದಿನ ನಡೆಯುವ ವಿಧಾನ ಮಂಡಲ ಅಧಿವೇಶನದ ಪ್ರಯುಕ್ತ ಬಂದೋಬಸ್ತ್ ಕರ್ತವ್ಯಕ್ಕೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪೊಲೀಸರಿಗೆ `ಒಂದಿಷ್ಟು ಅನ್ನ ಮತ್ತು ಬಣ್ಣದ ನೀರಿನಂತಿರುವ ಸಾಂಬಾರ' ಊಟಕ್ಕೆ ಹಾಕಿ ಕರ್ತವ್ಯ ಮಾಡಲು ಅಧಿಕಾರಿಗಳು ಆದೇಶ ಮಾಡಿರುವುದನ್ನು ಪತ್ರಿಕೆಯಲ್ಲಿ ಓದಿ ಬಹಳ ಖೇದವೆನಿಸಿತು.

ಸರ್ಕಾರ ಸಚಿವರ, ಶಾಸಕರ ಹಾಗೂ ಅಧಿಕಾರಿಗಳ ಒಂದು ಊಟಕ್ಕಾಗಿ ಸುಮಾರು 50-60 ಲಕ್ಷ ವೆಚ್ಚ ಮಾಡುತ್ತಿದೆ. ಅಧಿವೇಶನವನ್ನು ಸುರಕ್ಷಿತವಾಗಿ ನಡೆಯಲು 24 ಗಂಟೆ ಕರ್ತವ್ಯ ನಿರ್ವಹಿಸಿ, ಭದ್ರತೆ ನೀಡಲು ಸಿದ್ಧರಿರುವ ಅಮಾಯಕ ಪೊಲೀಸರಿಗೆ ಅವ್ಯವಸ್ಥಿತ ರೀತಿಯಲ್ಲಿ ಊಟ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುವುದು ಎಷ್ಟರ ಮಟ್ಟಿಗೆ ಸರಿ? ಯಾಕೆ ಪೊಲೀಸರು ಮನುಷ್ಯರಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.