ADVERTISEMENT

ಪ್ರತ್ಯೇಕ ಸಿಗ್ನಲ್ ಅಳವಡಿಸಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2012, 19:30 IST
Last Updated 25 ಜೂನ್ 2012, 19:30 IST

ಜಯನಗರ 5ನೇ ಬ್ಲಾಕ್‌ನ ರಾಘವೇಂದ್ರ ಮಠ ವೃತ್ತದಲ್ಲಿ ಜೆ. ಪಿ. ನಗರ ಕಡೆಯಿಂದ ಬರುವ ವಾಹನಗಳಿಗೆ ಬಲ ತಿರುವು ನಿಷೇಧ ಜಾರಿಯಲ್ಲಿದೆ. ಈ ಮುಂಚೆ ಮಠದ ಎದುರುಗಡೆ ಬಲ ತಿರುವು ನೀಡಲಾಗಿತ್ತು.

ಕೆಲವು ದಿನಗಳಿಂದ ಅಲ್ಲಿಯೂ ಬ್ಯಾರಿಕೇಡ್ ಹಾಕಲಾಗಿದೆ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿದೆ. ಹಾಗಾಗಿ ಈಗಿರುವ ಬಲ ತಿರುವು ನಿಷೇಧವನ್ನು ತೆಗೆದುಹಾಕಿ ನಾಲ್ಕೂ ಕಡೆಯಿಂದ ಬರುವ ವಾಹನಗಳಿಗೆ ಪ್ರತ್ಯೇಕ ಸಿಗ್ನಲ್ ಅಳವಡಿಸಿ ಜಯನಗರ 9ನೇ ಹಂತದ ಕಡೆ ಹೋಗುವ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.