ADVERTISEMENT

ಪ್ರಾಥಮಿಕ ಶಿಕ್ಷಣ ಬದಲಾಗಲಿ

ಮದನ್‌ಕುಮಾರ್ ಸಾಗರ, ಶಂಕರಘಟ್ಟ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ಮಾನಸಿಕ ಒತ್ತಡದಿಂದ ಶಾಲೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ಅಜೇಯ ಪ್ರಮೋದ ಜಾಧವನ ಬಗೆಗಿನ ದುರಂತದ ವರದಿಗಳು ನಮ್ಮ ಪ್ರಾಥಮಿಕ ಶಿಕ್ಷಣದ ದಿನಗಳನ್ನು ನೆನಪಿಸಿದವು. ಆ ದಿನಗಳಲ್ಲಿ ನಮಗೆ ನಿಜವಾಗಿಯೂ ಶಾಲೆ ಒಂದು ಸೆರೆಮನೆ ಎನಿಸುತ್ತಿತ್ತು, ಆತಂಕ ಮೂಡಿಸುತ್ತಿತ್ತು. ಪುಸ್ತಕಗಳಿಗಿಂತ ಹೆಚ್ಚಾಗಿ ಬೆತ್ತವೇ ಕಾಣುತ್ತಿತ್ತು. ಇಂದು ಪ್ರಾಥಮಿಕ ಶಿಕ್ಷಣದ ಪಠ್ಯಪುಸ್ತಕಗಳು ಬದಲಾಗುತ್ತಿವೆಯೆ ಹೊರತು ಶಿಕ್ಷಣದ ವಿಧಾನ ಬದಲಾಗುತ್ತಿಲ್ಲ. ಮಗುವಿನ ಮನವೊಲಿಸಿ ಅದು ತಾನಾಗಿಯೇ ಶಾಲೆಗೆ ಬರುವಂತಹ ವಾತಾವರಣ ನಿರ್ಮಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ಮಕ್ಕಳ ಮನೋಸ್ವಾಸ್ಥ್ಯ ಕಾಪಾಡಲು ಇದೀಗ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ವೇದಿಕೆಯ ಸದಸ್ಯರು ಶಾಲೆಗಳಲ್ಲಿ  ಹಾಗೂ ಪ್ರತೀ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮನಃಶಾಸ್ತ್ರಜ್ಞರ ನೇಮಕಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದ್ದಾರೆ. ಮಗುವಿನ ಮನವೊಲಿಸಲು ಸಾಧ್ಯವಾಗದ ಒಣ ಪಠ್ಯವಿಧಾನದಿಂದ ಹುಟ್ಟುವ ವ್ಯಾಧಿಯನ್ನು ನಿಲ್ಲಿಸಲಾಗದೆ ಅದಕ್ಕೆ ಮನಃಶಾಸ್ತ್ರಜ್ಞರ ಔಷಧಿ ನೀಡುತ್ತಿರುವುದು ಸರಿಯಲ್ಲ. ಮಗುವೊಂದು ಖುಷಿಯಿಂದ  ಕಲಿಯುವಂತಾಗುವ ಶಿಕ್ಷಣ ವಿಧಾನದ ಅಗತ್ಯವಿದೆ. ಆಗ ಈ ಬಗೆಯ ಆತ್ಮಹತ್ಯೆ ಪ್ರಕರಣಗಳು ನಡೆಯುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.