ADVERTISEMENT

ಪ್ರಾಮಾಣಿಕತೆಗೆ ಉಳಿಗಾಲವಿಲ್ಲ?

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಇತ್ತೀಚೆಗೆ ಮಧ್ಯಪ್ರದೇಶದ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನರೇಂದ್ರಕುಮಾರ್ ಸಿಂಗ್ ಅವರ ಕೊಲೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದು ಒಬ್ಬ ಅಧಿಕಾರಿಯ ಹತ್ಯೆಯಲ್ಲ. ಅದು ಪ್ರಾಮಾಣಿಕತೆಯ ಕಗ್ಗೊಲೆ. ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲ ಇಲ್ಲ ಎನ್ನುವಂತಹ ಪರಿಸ್ಥಿತಿ ಮಧ್ಯಪ್ರದೇಶದಲ್ಲಿ ನಿರ್ಮಾಣವಾಗಿದೆ.

ಮಧ್ಯಪ್ರದೇಶದ ಮಾಫಿಯಾಗಳು ಸಿಂಗ್ ಅವರಂತಹ ಹಲವು ಪ್ರಾಮಾಣಿಕ ಅಧಿಕಾರಿಗಳನ್ನು ಬಲಿ ತೆಗೆದುಕೊಂಡಿವೆ. ಅಕ್ರಮಗಳ ವಿರುದ್ಧ ಧ್ವನಿ ಎತ್ತುವ ಅಧಿಕಾರಿಗಳಿಗೆ ಇದೇ ಗತಿ ಎನ್ನುವ ಎಚ್ಚರಿಕೆ ಸಿಂಗ್ ಅವರ ಕೊಲೆಯ ಹಿಂದಿದೆ.

ಅಕ್ರಮ ವ್ಯವಹಾರಗಳನ್ನು ತಡೆಯುವ ಅಧಿಕಾರಿಗಳಿಗೆ ರಕ್ಷಣೆ ಇಲ್ಲ. ಇದು ಮಧ್ಯಪ್ರದೇಶ ಸರ್ಕಾರದ ದುರಾಡಳಿತದ ಸಂಕೇತ. ಸಿಂಗ್ ಅವರ ಕೊಲೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಕೊಲೆಗಾರರನ್ನು ಪತ್ತೆ ಹಚ್ಚಿ ಬಂಧಿಸಿದರೆ ಸಿಂಗ್ ಆತ್ಮಕ್ಕೆ ಶಾಂತಿ ಸಿಗುತ್ತದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.