ಬಾಣಸವಾಡಿ ರಸ್ತೆಯ ಸುಬ್ಬಣ್ಣಪಾಳ್ಯದಲ್ಲಿರುವ ಅಯ್ಯಪ್ಪ ದೇವಸ್ಥಾನ ಎದುರಿನ ಪಾದಚಾರಿ ಮಾರ್ಗದ ಟೈಲ್ಸ್ ಕಿತ್ತುಹೋಗಿದ್ದು, ಪಾದಚಾರಿಗಳು ನಡೆದಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ದೇವಸ್ಥಾನ ಎದುರಿನ ಒಡೆದ ಪೈಪ್ ಲೈನ್‌ನಿಂದ ನೀರು ಪೋಲಾಗಿ ರಸ್ತೆ ಮೇಲೆ ಗುಂಡಿಗಳಾಗಿವೆ.
ಒಡೆದ ಕೊಳವೆ ಸರಿಪಡಿಸುವುದನ್ನು ಬಿಟ್ಟು ಅದರ ಮೇಲೆ ಮಣ್ಣು ತಂದು ಸುರಿಯಲಾಗಿದೆ. ಇದರಿಂದ ಇಡೀ ಆವರಣವೇ ರೊಚ್ಚುಗುಂಡಿಯಾಗಿದೆ. ಕಳೆದ ಎರಡು ತಿಂಗಳಿನಿಂದ ವಾಹನ ಸವಾರರು ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
–ವಿ. ಪ್ರಸಾದ್, ಹೊರಮಾವು ಮುಖ್ಯರಸ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.