ಪಾವಗಡ ತಾಲ್ಲೂಕಿನಲ್ಲಿ ಈಗ ಬರ ಪರಿಸ್ಥಿತಿ ಇದೆ. ಕನಿಷ್ಠ ಮಳೆ ಬೀಳುವ ಈ ತಾಲ್ಲೂಕಿನಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ಜನರಿಗೆ ನರಕಸದೃಶ ಅನುಭವವಾಗುತ್ತದೆ.
ಇಡೀ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಅಭಾವವಿದೆ. ಅಲ್ಪ ಸ್ವಲ್ಪ ನೀರು ಸಿಕ್ಕರೂ ಅದು ಫ್ಲೋರೈಡ್ ಮಿಶ್ರಿತವಾಗಿದೆ. ಈ ನೀರು ಕುಡಿದವರು ಅಕಾಲ ವೃದ್ಧಾಪ್ಯಕ್ಕೆ ತುತ್ತಾಗುವ ಹಾಗೂ ಕಿಡ್ನಿಯಲ್ಲಿ ಕಲ್ಲುಗಳಾಗುವ ಅಪಾಯವಿದೆ. ವಿಧಿಯಿಲ್ಲದೆ ಜನರು ಅದೇ ನೀರು ಕುಡಿಯುತ್ತಾರೆ.
ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪಾವಗಡಕ್ಕೆ 0.5 ಟಿಎಂಸಿ ನೀರನ್ನು ಹೊರಗಿನಿಂದ ಪೂರೈಸುವ ಯೋಜನೆಗೆ ಜಾರಿಗೆ ತರುವ ಭರವಸೆ ನೀಡಿದ್ದರು. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನಾದರೂ ಈ ಭಾಗದ ಜನ ಪ್ರತಿನಿಧಿಗಳು ತಾಲ್ಲೂಕಿನ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.