ADVERTISEMENT

ಬಡಪಾಯಿ ಗಂಡ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST

‘ಪತಿಯ ವೇತನದ ವಿವರ ತಿಳಿಯುವ ಹಕ್ಕು ಪತ್ನಿಗಿದೆ’ (ಪ್ರ.ವಾ., ಮೇ 28) ಎಂಬ ತೀರ್ಪು ಬಡಪಾಯಿ ಗಂಡಂದಿರುಗಳಿಗೆ ಬರ ಸಿಡಿಲಿನಂತೆ ಬಂದಿದೆ.

ಆರನೆಯ ವೇತನ ಆಯೋಗದಿಂದಾದ ಹೆಚ್ಚಳವನ್ನು ತಮ್ಮದೇ ರೀತಿಯಲ್ಲಿ ಖರ್ಚು ಮಾಡಲು ಹೊಂಚು ಹಾಕಿದ್ದ ಪತಿರಾಯರು ಇನ್ಮುಂದೆ ತಮ್ಮ ವಾರ್ಷಿಕ ವೇತನ ಬಡ್ತಿ, ತುಟ್ಟಿ ಭತ್ಯದ ಹೆಚ್ಚಳ, ವೇತನ ಆಯೋಗದ ಶಿಫಾರಸಿನ ನಂತರದ ಹೆಚ್ಚಳ... ಹೀಗೆ ಯಾವುದನ್ನೂ ಮುಚ್ಚಿಡದೆ ‘ಗೃಹಮಂತ್ರಿ’ಗಳಾಗಿರುವ ಅರ್ಧಾಂಗಿಗೆ ಅರುಹಿ, ಅವರ ಅನುಮೋದನೆಯನ್ನು ಪಡೆದುಕೊಂಡು ತಮ್ಮ ಪಾಲನ್ನು ಪಡೆದುಕೊಳ್ಳುವುದು ವಿಹಿತ. ಕೊಂಚ ಯಾಮಾರಿದರೂ ಗಂಡಂದಿರುಗಳಿಗೆ ಗಂಡಾಂತರ ತಪ್ಪಿದ್ದಲ್ಲ.

– ವೆಂಕಟೇಶ ಮುದಗಲ್, ಕಲಬುರ್ಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.