ADVERTISEMENT

ಬಾರದ ವಾಹನ

ಪಿ.ಎ.ಸುಧೀಂದ್ರ
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST

ಜೂನ್ 30ರಂದು ವಿದ್ಯಾರಣ್ಯಪುರಕ್ಕೆ ಹೋಗಲು ಇಸ್ರೋ ಬಡಾವಣೆ ಬಸ್ ನಿಲ್ದಾಣದಲ್ಲಿ 276/210ಎ ವಾಹನಕ್ಕಾಗಿ ಬೆಳಿಗ್ಗೆ 10.40ರಿಂದ 11.30ರವರೆಗೆ ಕಾದರೂ ಬಸ್ ಬಾರದೆ 210ಆರ್ ವಾಹನದಲ್ಲಿ ಕೆಂ.ಬ.ನಿ.ಗೆ ಹೋಗಿ ಅಲ್ಲಿಂದ ವಿದ್ಯಾರಣ್ಯಪುರಕ್ಕೆ ಹೋಗಬೇಕಾಯಿತು.

ಬಸ್ ನಿಲ್ದಾಣದಲ್ಲಿ ತೂಗುಹಾಕಿರುವ ವೇಳಾಪಟ್ಟಿಯಲ್ಲಿ ಬೆಳಿಗ್ಗೆ 11.10ಕ್ಕೆ ಒಂದು ಟ್ರಿಪ್ ಇರುತ್ತದೆ. ಎರಡು ವರ್ಷಗಳ ಹಿಂದೆ ಈ ಮಾರ್ಗದಲ್ಲಿ ಐದಾರು ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ಈಗ ಅಪರೂಪವಾಗಿದೆ. ವಿಚಾರಿಸಲು ನಿಲ್ದಾಣದಲ್ಲಿರುವ ನಿಯಂತ್ರಕರು ಯಾವಾಗ ಲಭ್ಯವಾಗುತ್ತಾರೆಂಬುದೇ ತಿಳಿಯುವುದಿಲ್ಲ.

ಕೋಟಿಗಟ್ಟಲೆ ಹಣ ಖರ್ಚು ಮಾಡಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಆದರೆ ಬಸ್‌ಗಳ ವ್ಯವಸ್ಥೆ ಮಾತ್ರ ಯಥಾಸ್ಥಿತಿಯಲ್ಲೇ ಇರುತ್ತದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ನೀಡಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.