ಬಹುಮತ ಪಡೆದಿರುವ ರಾಜ್ಯದ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಗುರುತರ ಹೊಣೆಗಾರಿಕೆ ಇದೆ. ಪತ್ರಿಕೆಯಲ್ಲಿ ಅಗ್ರಲೇಖನ ಬರೆಯುತ್ತಿರುವ ಅಂಕಣಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವೈಯಕ್ತಿಕವಾಗಿ ಶುಭಾಶಯ ಸಲ್ಲಿಸುತ್ತಿರುವುದನ್ನು ಓದುಗರು ಗಮನಿಸುತ್ತಿದ್ದಾರೆ.
ಇವರ ಬಾಲಬಡುಕ ಪ್ರವೃತ್ತಿ ಸಲ್ಲದು. ಅದು ಖಾಸಗಿಯಾಗಿರಲಿ. ಬುದ್ಧಿಜೀವಿಗಳೆನಿಸಿಕೊಂಡ ಪ್ರೊಫೆಸರು, ಸಾಹಿತಿಗಳು ಈ ಕೆಲಸ ಮಾಡಲು ಬೇರೆ ವೇದಿಕೆ ಹಂಚಿಕೊಳ್ಳಬೇಕು. ಅಧಿಕಾರಕ್ಕಾಗಿ ಇವರು ಅವರ ಬಾಲಂಗೋಚಿ ಆಗಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.