ADVERTISEMENT

ಬಿಜೆಪಿ ಸಮಗ್ರತೆ ಕಾಪಾಡುವುದೇ?

ಕೆ.ಎನ್.ಭಗವಾನ್
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಘ ಪರಿವಾರದ ಕೊಡುಗೆ ಶೂನ್ಯವಾದರೂ, ಭಾರತದ ಇತಿಹಾಸ, ಸಂಸ್ಕೃತಿ, ಪರಂಪರೆ ಮುಂತಾದುವುಗಳ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರು ಕಾಂಗ್ರೆಸ್ಸನ್ನು ಬಗ್ಗು ಬಡಿಯಬೇಕೆನ್ನುವ ಹುಮ್ಮಸ್ಸಿನಲ್ಲಿ ತಮ್ಮ ನಿಲುವನ್ನು ಬದಲಾಯಿಸುವುದರಲ್ಲಿ ನಿಷ್ಣಾತರು.

ಅಣ್ಣಾ ಹೋರಾಟಕ್ಕೆ ಬಿಜೆಪಿಯ ಸಂಪೂರ್ಣ ಬೆಂಬಲ. ಆದರೆ  `ಜನ ಲೋಕಪಾಲಕ್ಕೆ ಬೆಂಬಲವಿಲ್ಲ. ಜನ ಲೋಕಪಾಲ್ ಮಸೂದೆಯನ್ನು ಆಗಸ್ಟ್ 30 ರೊಳಗೆ ಸಂಸತ್ತು ಅನುಮೋದಿಸಬೇಕು~ ಎಂದು ಸಮಿತಿ ಹೇಳಿದಾಗ ಮೌನ. ಆದರೆ ಸಂಸತ್ತಿನಲ್ಲಿ ಹೇಳಿದ್ದು ಸಂಸತ್ತಿಗೆ ಈ ರೀತಿ ಆದೇಶ ಕೊಡುವುದು ತಪ್ಪು, ಹಾಗಾದರೆ ಅಣ್ಣಾಗೆ ಬೆಂಬಲ ಕೊಟ್ಟಿದ್ದೇಕೆ?

ದೆಹಲಿಯಲ್ಲಿ `ಬಲಿಷ್ಠ ಲೋಕಪಾಲ~ ಬೇಕು ಎಂದರೂ ಕರ್ನಾಟಕದಲ್ಲಿ ಲೋಕಾಯುಕ್ತ ಹೆಚ್ಚು ಅಧಿಕಾರ ಕೊಡುವುದಿಲ್ಲ. ಈಗ ಗುಜರಾತಿನಲ್ಲಿ ಅಲ್ಲಿನ ರಾಜ್ಯಪಾಲರು ಅಲ್ಲಿನ ಕಾನೂನಿನಂತೆ ಲೋಕಾಯುಕ್ತರನ್ನು ನಿಯುಕ್ತಿ ಮಾಡಿದರೆ ನರೇಂದ್ರ ಮೋದಿಯಿಂದ ವಿರೋಧ. ಮೋದಿ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದಿದ್ದರೆ ಹೆದರಿಕೆ ಏಕೆ? (ಅಲ್ಲಿನ ಸಿಎಜಿ ಪ್ರಕಾರ ರೂ. 26,000 ಕೋಟಿ ಗುಳುಂ ಆಗಿದೆ). ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದವರಿಗೆ ಗಲ್ಲು `ಶಿಕ್ಷೆ ಕೊಟ್ಟ ನ್ಯಾಯಾಲಯದ ತೀರ್ಪನ್ನು ಬದಲಾಯಿಸಬೇಕೆಂಬ ತಮಿಳುನಾಡಿನ ವಿಧಾನಸಭೆ ನಿರ್ಣಯ ಕೈಗೊಂಡಾಗ ಸುಮ್ಮನಿದ್ದ ಬಿಜೆಪಿ, ಕಾಶ್ಮೀರದ ಮುಖ್ಯಮಂತ್ರಿ~ ನಾವೂ ಹಾಗೇ ಅಫ್ಜಲ್‌ಗುರು ಬಗ್ಗೆ ನಿರ್ಣಯ ತೆಗೆದುಕೊಂಡರೆ ಹೇಗೆ ಎಂದ ತಕ್ಷಣ ಬಿಜೆಪಿ ಹೌಹಾರುತ್ತಿದೆ. ಬಿಜೆಪಿ ದೇಶದ್ರೋಹಿಗಳನ್ನು ಜಾತಿ ಆಧಾರದ ಮೇಲೆ ಯಾಕೆ ನೋಡುತ್ತಿದೆ, ಈಗಲೂ ಸಂಘ ಪರಿವಾರ ನಾಥೂರಾಂ ಗೋಡ್ಸೆ, ಕರ್ನಲ್ ಪುರೋಹಿತ್, ಸಾಧ್ವಿ ಪ್ರಗ್ಯಾ, ಸ್ವಾಮಿ ಅಸೀಮಾ ನಂದರನ್ನು ದೇಶದ್ರೋಹಿಗಳು ಎಂದೇಕೆ ಕರೆಯುವುದಿಲ್ಲ? ದೇಶದ ಸಮಗ್ರತೆ ಕಾಪಾಡಲು ಬಿಜೆಪಿಗೆ ಮನಸ್ಸಿದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.