`ಅಣ್ಣಾ~ನ
ಕ್ರಾಂತಿಯ ಕಹಳೆಗೆ
ಪುಟವಿಟ್ಟು ಫೂತ್ಕರಿಸಿದ್ದಾಳೆ
ರೂಪದರ್ಶಿ `ಅಕ್ಕ~,
ಜನಲೋಕಪಾಲ ಮಸೂದೆ
ಜಾರಿಯಾಗದೇ ಹೋದಲ್ಲಿ
ಬಹಿರಂಗವಾಗಿ ಬೆತ್ತಲಾಗುವೆನೆಂದು!!
ಬಿಚ್ಚಿ ತೋರುವೆ,
ತೋರುತ್ತಲೆ ತೋಲಾಡುವೆ ಎಂದು...
ಆಹಾ... ಸೃಷ್ಟಿಯ ಸೊಬಗೇ?
ನಿನ್ನದೆಂತಹ ಶೃಂಗಾರ ವೈಶಾಲ್ಯ?
ತಡ ಮಾಡಬೇಡ ಕೋಮಲೆ
ಜಾರಿಯಾದೀತು ಮಸೂದೆ
ಅಷ್ಟರೊಳಗೆ ತೋರಿಬಿಡು
ರಾಮಲೀಲಾ ಮೈದಾನದಲ್ಲಿ
ನಿನ್ನದೂ ಒಂದು
`ಮೈ~ಲುಗಲ್ಲಿನ ಲೀಲೆ!!!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.