ADVERTISEMENT

ಬೇರೆ ಧರ್ಮದವರಿಗೂ ಅನ್ವಯವಾಗಲಿ

ಡಾ.ಮುಮ್ತಾಜ್‌ ಅಲಿ ಖಾನ್ ಬೆಂಗಳೂರು
Published 29 ಅಕ್ಟೋಬರ್ 2013, 19:30 IST
Last Updated 29 ಅಕ್ಟೋಬರ್ 2013, 19:30 IST

ರಾಜ್ಯ ಸರ್ಕಾರವು ಮುಸ್ಲಿಂ ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಾಯ ಒದಗಿಸಲು ಮುಂದೆ ಬಂದರೂ ವಿಧಿಸಿರುವ ಷರತ್ತುಗಳನ್ನು ಪೂರ್ಣವಾಗಿ ಪರಿಪಾಲಿಸು ವುದರಲ್ಲಿ ಬಹುತೇಕ ಮುಸ್ಲಿಂ ಕುಟುಂಬಗಳು ವಿಫಲರಾಗುವುದ ರಲ್ಲಿ ಅನುಮಾನವೇ ಇಲ್ಲ. ಆದರೂ ಸರ್ಕಾರದ ಉದ್ದೇಶ ಬಡವರಿಗೆ ಸಹಾಯ ಮಾಡುವುದು. ಈ ಹೊಸ ಯೋಜನೆಯನ್ನು ಸಮಾಜದ ಎಲ್ಲಾ ವರ್ಗದವರು ಸ್ವಾಗತಿಸಬೇಕು.

ಮುಸ್ಲಿಂ ಹೆಣ್ಣು ಮಕ್ಕಳಿಂದ ಈ ಯೋಜನೆ ಪ್ರಾರಂಭವಾಗಲಿದೆ. ಇದು ಅಲ್ಪ ಸಂಖ್ಯಾತರ ಇಲಾಖೆಯಿಂದ ಪ್ರಾರಂಭವಾಗಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೂ ಇದರ ಲಾಭ ಸಿಗಬೇಕು. ನಾನು ಮುಖ್ಯಮಂತ್ರಿಗಳಲ್ಲಿ ಕೇಳಿಕೊಳ್ಳುವುದೇನೆಂದರೆ ಆದಷ್ಟು ಮಟ್ಟಿಗೆ ಈ ಯೋಜನೆ ಸಮಾಜದ ಎಲ್ಲಾ ವರ್ಗಗಳ ಬಡವರಿಗೆ ಅನ್ವಯವಾಗುವಂತೆ ಮಾಡಬೇಕು.

ಟಿಪ್ಪು ಸುಲ್ತಾನ್‌ರ ಕಾಲದಲ್ಲಿ ಬಡತನದಿಂದ ಮದುವೆ ಆಗದೆ ಇರುವ ಎಲ್ಲಾ ಹೆಣ್ಣು ಮಕ್ಕಳಿಗೆ ಸರ್ಕಾರವೇ ಮದುವೆ ಖರ್ಚನ್ನು ಕೊಡುವ ಆದೇಶವನ್ನು ಹೊರಡಿಸಲಾಗಿತ್ತು. ಸಾಮಾಜಿಕ ನ್ಯಾಯ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ಹೆಣ್ಣು ಮಕ್ಕಳು ಈ ಯೋಜನೆ ಲಾಭ ಪಡೆದರೆ ಪೋಷಕರ ಆಶೀರ್ವಾದ ಸರ್ಕಾರಕ್ಕೆ ಸಿಗುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.