ADVERTISEMENT

ಭಲೇ ಮುಖ್ಯಮಂತ್ರಿಗಳೇ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

`ನನಗೆ ಸನ್ಮಾನವೇಕೆ~ ಎಂದು ಮುಖ್ಯಮಂತ್ರಿ ಪ್ರಶ್ನಿಸಿರುವುದು ಅತ್ಯುತ್ತಮ ನಿರ್ಧಾರವೇ ಸರಿ.ರಾಜ್ಯದ 123 ತಾಲೂಕುಗಳಲ್ಲಿ ಬರ ಬಂದಿದ್ದು ಜನತೆಗೆ ಕುಡಿಯಲು ನೀರಿಲ್ಲ, ದುಡಿಯಲು ಕೆಲಸವಿಲ್ಲ.

ಖಾತರಿ ಯೋಜನೆಯಲ್ಲಿ ದುಡಿದವರಿಗೆ ಕೂಲಿಯಿಲ್ಲ. ಜನತೆ ತತ್ತರಿಸಿಹೋಗಿದ್ದಾರೆ. ತಮ್ಮ ಮೂಲಭೂತ ಸಮಸ್ಯೆ ಪರಿಹರಿಸಿಕೊಳ್ಳಲು ನಿತ್ಯ ಹೆಣಗಾಡುತ್ತಾ ಹಸಿದ ಹೊಟ್ಟೆಯಲ್ಲಿರುವವರ ಮುಂದೆ ಹಾರ - ತುರಾಯಿ ಹಾಕಿಕೊಂಡು ಮೆರೆದರೆ ಬಂದ ಫಲವೇನು ಎಂದು ಕೇಳುವ     ಮುಖ್ಯಮಂತ್ರಿ ನಿಜಕ್ಕೂ ಜನಪರ ಚಿಂತಕರೆನ್ನುವಲ್ಲಿ ಸಂದೇಹವಿಲ್ಲ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.