ಚೌತಾಲಗೆ 10 ವರ್ಷ ಜೈಲು
ಹೆಮ್ಮರವಾಗಿದೆ ಭ್ರಷ್ಟಾಚಾರದ ಫೈಲು
ಬರಿದೆ ಗಾಂಧಿ ಟೋಪಿಗಳ ಹುಯಿಲು;
ದೆಹಲಿ ನೆನಪಿನ ಕಿಂಡಿಯ ಹಿಂದೆ
ಇರಿಯುತ್ತಿವೆ ಅತ್ಯಾಚಾರಿಗಳ
ಸಾವಿರ ನೋಟ
ಕಳ್ಳನಗೆಯಲ್ಲೇ ಕಂಬಿ ಸವರುತ್ತಿದೆ
ದುಷ್ಟರ ಕೂಟ;
ಭ್ರಷ್ಟಾಚಾರ-ಅತ್ಯಾಚಾರ
ಎಲ್ಲೆಲ್ಲೂ ಸದಾ ಇದೇ ಸಮಾಚಾರ,
ವಿಶ್ವಕ್ಕೇ ಆಚಾರ ಕಲಿಸಿದವರೆಂದು
ಬೀಗುವ ನಾಡಲ್ಲಿ
ಹೇಗಿದೆ ನೋಡಿ ಸದಾಚಾರ..!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.