ADVERTISEMENT

ಮಠ ಪತಿಗಳ ಪಾರುಪತ್ಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ರಾಜ್ಯದ ಪ್ರಸ್ತುತ ರಾಜಕಾರಣದಲ್ಲಿ, ಸರ್ಕಾರದ ವ್ಯವಹಾರಗಳಲ್ಲಿ ಜಾತಿ ಪ್ರಾಬಲ್ಯ ಹೊಂದಿರುವ ಕೆಲವು ಮಠಾಧೀಶರು ಮೂಗು ತೂರಿಸುತ್ತಿದ್ದಾರೆ. ತಮ್ಮ ಜಾತಿ ಮಂತ್ರಿಗಳನ್ನು ಮುಂದಿಟ್ಟುಕೊಂಡು ತಮಗೆ ಬೇಕಾದ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗ ಮಠಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರತಿಯೊಂದು ಜಾತಿ, ಉಪ ಜಾತಿಯ ಮಠಗಳು ತಲೆ ಎತ್ತುತ್ತಿವೆ. ತಮ್ಮ ಮಠಕ್ಕೆ ಎಷ್ಟು ಮಂದಿ ಶಾಸಕರ ಬೆಂಬಲ ಇದೆ ಎನ್ನುವುದರ ಮೇಲೆ `ಮಠ ಪತಿ~ ಬೆಲೆ ನಿಗದಿ ಆಗುತ್ತದಂತೆ.

ಮುಖ್ಯಮಂತ್ರಿ ಸದಾನಂದ ಗೌಡರೂ ಮಠಾಧೀಶರನ್ನು ಓಲೈಸಲು ಮಠಗಳಿಗೆ ಬೊಕ್ಕಸದ ಹಣ ನೀಡಿದರೆ ಆಶ್ಚರ್ಯವಿಲ್ಲ. ಇದು ಕೆಟ್ಟ ಬೆಳವಣಿಗೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಕಂಟಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT