ADVERTISEMENT

ಮತದಾನ ಕಡ್ಡಾಯವಾಗಲಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST

ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಚುನಾವಣಾ ಆಯೋಗವು ವಿವಿಧ ಸಂಘ– ಸಂಸ್ಥೆಗಳ ಜೊತೆ ಕೈಜೋಡಿಸಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇದೆ.

ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯ. ಆದರೆ ಹಳ್ಳಿಗಳ ಜನರು ಮತದಾನದಲ್ಲಿ ತೋರುವಷ್ಟು ಒಲವನ್ನು ನಗರಗಳ ವಿದ್ಯಾವಂತ ಜನರು ತೋರಿಸುತ್ತಿಲ್ಲ ಎಂಬುದು ಬೇಸರದ ವಿಚಾರ. ಆದ್ದರಿಂದ ಮತದಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯವೆನಿಸುತ್ತದೆ.

ಮತದಾನ ಮಾಡಿದವರಿಗೆ ರಸೀದಿ ಕೊಡುವ ವ್ಯವಸ್ಥೆ ಜಾರಿಗೊಳಿಸಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ರಸೀದಿಯನ್ನು ತೋರಿಸುವುದು ಕಡ್ಡಾಯಗೊಳಿಸಿದರೆ ಮತದಾನ ಪ್ರಮಾಣ ಹೆಚ್ಚಬಹುದು. ಸೌಲಭ್ಯ ವಂಚಿತರಾಗುವ ಭಯದಿಂದಲಾದರೂ ಹೆಚ್ಚಿನವರು ಮತದಾನ ಮಾಡುವ ಸಾಧ್ಯತೆ ಇದೆ. ಇದರಿಂದ ಶೇ 90ಕ್ಕಿಂತ ಹೆಚ್ಚು ಮತದಾನ ಸಾಧಿಸಲು ಸಾಧ್ಯ.

ADVERTISEMENT

ಮಧು ದೇವರಾಜ್ ಕೆ., ಹಳೇಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.