ADVERTISEMENT

ಮದ್ಯ ನಿಷೇಧ ಹೆಣ್ಣಿನ ಆಶಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 19:30 IST
Last Updated 13 ಅಕ್ಟೋಬರ್ 2011, 19:30 IST

`ಮದ್ಯದ ಕುರಿತು ಪುನಾರಾಲೋಚನೆ ಅತ್ಯಗತ್ಯ~ (ಸಂಗತ ಅ.12) ಸಚ್ಚಿದಾನಂದ ಹೆಗಡೆ ಅವರ ಬರಹ ಪ್ರಸ್ತುತ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಹೆಚ್ಚು ಆದಾಯ ತರುವ ಖಾತೆಯೆಂದು ವಿವೇಚನೆ ಇಲ್ಲದೆ ಎಲ್ಲೆಂದರಲ್ಲಿ ಪರವಾನಗಿ ನೀಡುತ್ತಿರುವುದು ನಿಲ್ಲಬೇಕು.

ಸಮಾಜದ ಹಿತವನ್ನೇ ಬಲಿ ಕೊಡುತ್ತಿರುವ ಇಂದಿನ ಸನ್ನಿವೇಶದಲ್ಲಿ  ಮದ್ಯಪಾನ ನಿಷೇಧವಾಗ ಬೇಕೆಂದು ಎಲ್ಲ ಹೆಣ್ಣು ಮಕ್ಕಳ ಒಡಲ ದನಿಯು ಹೌದು. ಕಟ್ಟೆ ಮಳಲವಾಡಿ ಹಳ್ಳಿಯ ಘಟನೆಯು ಇದಕ್ಕೆ ಪುಷ್ಟಿನೀಡುತ್ತದೆ.ಮದ್ಯಪಾನ ನಿಯಂತ್ರಣ ದಿಂದ ಪೊಲೀಸ್ ನ್ಯಾಯಾಂಗ ವ್ಯವಸ್ಥೆಯ ಖರ್ಚನ್ನು ಕಡಿಮೆ ಮಾಡಬಹುದು ಎಂಬುದು ಹೊಸ ದೃಷ್ಟಿಕೋನವಾಗಿದೆ.

ವಾಸ್ತವವಾಗಿ ಅಂಕೆ ಸಂಖ್ಯೆಗಳನ್ನು ಗಮನಿಸಿ ದಾಗ ಮದ್ಯದಿಂದ ಸರ್ಕಾರಕ್ಕೆ ನಷ್ಟವೇ ಹೊರತು ಲಾಭವಿಲ್ಲ. ಹೀಗಿರುವಾಗ ಮದ್ಯದ ಹಿಂದಿನ ಯೋಜನಾಭರಿತ ಚಿಂತನೆಗಳನ್ನು ಬಿಟ್ಟು ಈಗ ಪ್ರಸ್ತುತದಲ್ಲಿ ಯಾವ ರೀತಿಯ ಪರವಾನಿಗೆ ನೀಡಬೇಕು ಎಂಬುದನ್ನು ನಿರ್ಧರಿಸಬೇಕಾಗಿರು ವುದು ಇಂದಿನ ತುರ್ತು ಅಗತ್ಯವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.