ADVERTISEMENT

ಮನವೊಲಿಸಲಿ

ವಿಜಯಕಾಂತ ಪಾಟೀಲ
Published 3 ಏಪ್ರಿಲ್ 2016, 19:56 IST
Last Updated 3 ಏಪ್ರಿಲ್ 2016, 19:56 IST

ಮಹಾದಾಯಿ ವಿವಾದ ಇತ್ಯಥ್ಯಕ್ಕೆ ಪ್ರಧಾನಿ ಮಧ್ಯಪ್ರವೇಶಿಸುವುದು ಉಚಿತ. ಕುಡಿಯುವ ನೀರಿನ ವಿಚಾರದಲ್ಲಿ ಪಕ್ಷ ರಾಜಕಾರಣ, ವ್ಯಕ್ತಿ ಪ್ರತಿಷ್ಠೆಗಳು ಸಲ್ಲದು. ರಾಜ್ಯದ ಎಲ್ಲ ಪಕ್ಷಗಳ ಮುಖಂಡರು ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಸಂಧಾನಕ್ಕೆ ವೇದಿಕೆ ಕಲ್ಪಿಸುವಂತೆ  ಕೇಂದ್ರದ ಮೇಲೆ ಒತ್ತಡ ಹೇರಬೇಕು. 

ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಗೋವಾದಲ್ಲಿಯೂ ಅದೇ ಪಕ್ಷದ ಸರ್ಕಾರ ಇದೆ. ಈ ಕಾರಣಕ್ಕಾಗಿ ಆ ಪಕ್ಷ ಅಲ್ಲಿನ ಮುಖ್ಯಮಂತ್ರಿಯವರ ಮನವೊಲಿಸುವ ಜವಾಬ್ದಾರಿ ಹೊರಬೇಕು. ಕರ್ನಾಟಕದ ಸ್ಥಿತಿಯನ್ನು ವಿವರಿಸಿ ಕುಡಿಯುವ ನೀರಿನ ಯೋಜನೆಗೆ ತಕರಾರು ತೆಗೆಯುವುದು ಬೇಡ ಎಂದು ಮನವಿ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.