ADVERTISEMENT

‘ಮನ್ನಾ’ ಕಷ್ಟಕ್ಕೆ ಮುಕ್ತಿಯೇ?

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 19:30 IST
Last Updated 5 ಜೂನ್ 2018, 19:30 IST

ಸಾಲಮನ್ನಾದ ಬಗ್ಗೆ ಎಂ.ಎಸ್. ಶ್ರೀರಾಮ್‌ ಅವರು ಬರೆದ ಲೇಖನ ಹಾಗೂ ಅದೇ ದಿನದ ಪತ್ರಿಕೆಯಲ್ಲಿ ಪ್ರಕಟವಾದ ರೈತರೊಂದಿಗೆ ಮುಖ್ಯಮಂತ್ರಿ ನಡೆಸಿದ ಸಭೆಯ ಸುದ್ದಿಗಳನ್ನು (ಪ್ರ.ವಾ., ಮೇ 31) ಓದಿ ಈ ಪ್ರತಿಕ್ರಿಯೆ.

ಈಗ ರಾಜ್ಯದಲ್ಲಿ ಸಾಲ ಮನ್ನಾದ ಗದ್ದಲ ಜೋರಾಗಿದೆ. ‘2009ಕ್ಕಿಂತ ಹಿಂದಿನ ಸಾಲ ಮತ್ತು 2017ರ ಡಿಸೆಂಬರ್‌ಗಿಂತ ಈಚಿನ ಸಾಲವನ್ನೂ ಮನ್ನಾ ವ್ಯಾಪ್ತಿಗೆ ಒಳಪಡಿಸಬೇಕು ಎಂಬ ಒತ್ತಾಯ ಬರುತ್ತಿದೆ. ಇದು ದಲ್ಲಾಳಿ ಬುದ್ಧಿ ಅಷ್ಟೆ.

ಕೃಷಿ ಸಾಲವನ್ನು ಜನ ಯಾವ್ಯಾವ ರೀತಿಯಲ್ಲಿ ಬಳಸಿದ್ದಾರೆ ಎಂಬುದನ್ನು ಕುಮಾರಸ್ವಾಮಿಯವರು ಪ್ರಸ್ತಾಪಿಸಿರುವುದು ಸಮರ್ಪಕವಾಗಿದೆ. ರಾಜ್ಯ ಸರ್ಕಾರ ನೇಮಿಸುವ ‘ನೋಡಲ್ ಆಫೀಸರ್’ಗಳು ಪ್ರತಿ ಕೃಷಿ ಸಾಲ ಖಾತೆಯನ್ನು ಪರಿಶೀಲಿಸಲು ಸಾಧ್ಯವೇ?

ADVERTISEMENT

ಕಿಸಾನ್ ಕ್ರೆಡಿಟ್ ಕಾರ್ಡ್‌ನಂತಹ ಯೋಜನೆಗಳು ಸಹ ಸದುಪಯೋಗ ಆಗಿದ್ದು ಕಡಿಮೆ. ಟ್ರ್ಯಾಕ್ಟರ್ ಸಾಲ ಮಾಡಲು ಮಧ್ಯಮ ಹಿಡುವಳಿ– ಆದಾಯ ಇರುವವರು ಧೈರ್ಯ ಮಾಡುವಂತಿಲ್ಲ. ಸ್ವಂತ ಜಮೀನಿನಲ್ಲಿ ವಾರ್ಷಿಕ ಎಷ್ಟು ಗಂಟೆ ಅದರ ಉಪಯೋಗ ಇದೆ? (ಸಾಲ ನೀಡಿದ ಮತ್ತು ವಸೂಲಿ ಮಾಡಿದ ಅನುಭವ ನನಗೆ ಇದೆ). ಬಾಡಿಗೆಗೆ ಕೊಡುವುದು, ಕೃಷಿಯೇತರ ಕೆಲಸಕ್ಕೆ ಬಳಸುವುದೇ ಮುಖ್ಯವಾಗಬಾರದು.

‘ಮುಂದೆಂದೂ ರೈತನು ಸಾಲ ಮಾಡುವ ಸಂದರ್ಭ ಬಾರದಂತೆ ಮಾಡುತ್ತೇನೆ’ ಎಂಬ ಮುಖ್ಯಮಂತ್ರಿಯವರ ಮಾತು ಕಾರ್ಯಸಾಧುವೇ?

ಎಚ್.ಎಸ್. ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.