ನಗರದಲ್ಲಿ ಎಲ್ಲಾ ನಾಲೆಗಳು ಕಾಂಕ್ರೀಟ್‌ಮಯವಾಗಿ ಮಳೆ ಬಂದರೆ ನೀರು ರಸ್ತೆಯಲ್ಲಿ ಹರಿಯುತ್ತದೆ. ನಾಲೆಗಳೆಲ್ಲ ಕಸ, ಮಣ್ಣಿನಿಂದ ತುಂಬಿ ಮಳೆಗಾಲದಲ್ಲಿ ಜನ ಓಡಾಡಲು ಸಹ ಬಹಳ ತೊಂದರೆಯಾಗುತ್ತಿದೆ.
ಉದ್ಯಾನವನಗಳಲ್ಲಿ, ಆಟದ ಮೈದಾನಗಳು ಹಾಗೂ ಬೋರ್‌ವೆಲ್ ಸುತ್ತ ನೀರು ಇಂಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಬಿ.ಬಿ.ಎಂ.ಪಿ.ಯವರು ಪ್ರತಿ ವರ್ಷವೂ ಸಸಿಗಳನ್ನು ಹಾಕುತ್ತಾರೆ. ಆದರೆ ಸಕಾಲದಲ್ಲಿ ನೆಡುವುದಿಲ್ಲ. ಬೇಸಿಗೆಯಲ್ಲಿ ಎಲ್ಲವೂ ಒಣಗುತ್ತವೆ. ಜೂನ್ ತಿಂಗಳಿನಲ್ಲಿ ಹೊಂಗೆ ಸಸಿಗಳನ್ನು ನೆಟ್ಟರೆ ಅವು ಬೇಸಿಗೆಯಲ್ಲೂ ಉಳಿಯುತ್ತವೆ. ನಗರಕ್ಕೆ ನೆರಳು, ಗಾಳಿ ಜೊತೆಗೆ ಜೈವಿಕ ಇಂಧನಕ್ಕೂ ಸಹಾಯವಾಗುತ್ತದೆ. 8-10 ವರ್ಷಗಳಲ್ಲಿ ನಾನು ಒಂದು ಲಕ್ಷಕ್ಕೂ ಮೇಲ್ಪಟ್ಟು ಸಸಿಗಳನ್ನು ಇಲಾಖೆಗಳ ಸಹಕಾರದಿಂದ ಹಾಕಿಸಿದ್ದೇನೆ. ಹೊಂಗೆ ಸಸಿ ಮಾತ್ರ ಉಳಿದಿದೆ.
ಸಂಬಂಧಪಟ್ಟ ತಹಸೀಲ್ದಾರರನ್ನು, ಜಿಲ್ಲಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಪರಿಸರ ಸಂರಕ್ಷಿಸಲು ಮುಂದಾಗಬೇಕು. ಮಳೆ ನೀರು ವ್ಯರ್ಥವಾಗದಂತೆ, ಸಸಿಗಳು ಮರಗಳಾಗಿ ಬೆಳೆಯುವಂತೆ ಕ್ರಮಕೈಗೊಳ್ಳಲು ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.