ADVERTISEMENT

ಮಹಿಳಾ ಆಯೋಗ ಅಧ್ಯಕ್ಷರ ಅಸಂಬದ್ಧ ಮಾತು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 19:30 IST
Last Updated 8 ಆಗಸ್ಟ್ 2012, 19:30 IST

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ `ಹೋಂ ಸ್ಟೇ~ ಮೇಲಿನ ದಾಳಿಯ ಬಗ್ಗೆ ವಿಚಾರಿಸಲು ಬಂದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು, ಸದರಿ ದಾಳಿಯಲ್ಲಿ ನೊಂದ ಯುವಕನೋರ್ವನ ತಾಯಿಯ ಚಾರಿತ್ರ್ಯದ ಬಗ್ಗೆ ಆಡಿರುವ ಮಾತುಗಳು ಅತ್ಯಂತ ಆಕ್ಷೇಪಾರ್ಹ ಮತ್ತು ಖಂಡನೀಯ.

ಇಂತಹ ಮಾತುಗಳು ಅವರ ಸ್ಥಾನಕ್ಕೆ ಮತ್ತು ಜವಾಬ್ದಾರಿಗೆ ಖಂಡಿತವಾಗಿಯೂ ಗೌರವ ತರುವಂಥದ್ದಲ್ಲ.ಇನ್ನೂ ವಿಷಾದದ ಸಂಗತಿಯೆಂದರೆ ಅವರು ಯಾವ ಸಂಗತಿಯ ಬಗ್ಗೆ ಮಾತನಾಡಬೇಕಿತ್ತೋ ಅದೊಂದನ್ನು ಬಿಟ್ಟು ತಮ್ಮ ವ್ಯಾಪ್ತಿಗೆ ಬರದ ಇನ್ನೆಲ್ಲ ಸಂಗತಿಗಳ ಬಗ್ಗೆ ಮಾತನಾಡಿ ಹೋಗಿದ್ದಾರೆ.

ರಾಜ್ಯದ ಮುಖ್ಯಮಂತ್ರಿ, ಗೃಹಮಂತ್ರಿ ಸಹಿತ ಸರಕಾರದ ಅನೇಕ ಶಾಸಕರು ಸಚಿವರೇ ಈ ದಾಳಿಕೋರರ ವರ್ತನೆಯನ್ನು ಖಂಡಿಸಿರುವಾಗ, ಮಹಿಳಾ ಆಯೋಗದ ಅಧ್ಯಕ್ಷರಿಗೆ ಇಂತಹ ಆಕ್ಷೇಪಾರ್ಹ ಹೇಳಿಕೆ ನೀಡುವ ಅನಿವಾರ್ಯತೆಯಾದರೂ ಏನು?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.