ADVERTISEMENT

ಮಾಜಿ ಶಾನುಭೋಗರ ಪೆನ್ಷನ್ ಖೋತಾ

​ಪ್ರಜಾವಾಣಿ ವಾರ್ತೆ
Published 7 ಜೂನ್ 2012, 19:30 IST
Last Updated 7 ಜೂನ್ 2012, 19:30 IST

ಮಾಜಿ ಶಾನುಭೋಗರುಗಳಿಗೆ ನಿವೃತ್ತಿ ವೇತನ ಬೇಡವೇ? ಸರ್ಕಾರ ಏಕೆ ನಮ್ಮತ್ತ ನೋಡುತ್ತಿಲ್ಲ?. ಈಗ ಬದುಕಿ ಉಳಿದಿರುವ, ಮಾಜಿ ಶಾನುಭೋಗರುಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಮಾಜಿ ಶಾಸಕರಿಗೆ ಹೆಚ್ಚಿಸಿರುವ ನಿವೃತ್ತಿ ವೇತನದ ಅರ್ಧ ಭಾಗ ವೆಚ್ಚವಾಗಬಹುದು ಸರ್ಕಾರದ ಬೊಕ್ಕಸಕ್ಕೆ.
 
ಮಾಜಿ ಶಾಸಕರಿಗೆ ನಿವೃತ್ತಿ ವೇತನ ಹೆಚ್ಚಿಸಲು ತೆಗೆದುಕೊಂಡ ಆಸಕ್ತಿ, ಅನುಕಂಪ ಈ ಸಾಧಾರಣ ಪ್ರಜೆಗಳಾದ ಶಾನುಭೋಗರುಗಳಿಗೆ  ನಿವೃತ್ತಿ ವೇತನ ನೀಡಲು ಏಕಿಲ್ಲ?  ನನ್ನ ತಂದೆ ಜಗಳೂರು ತಾಲ್ಲೂಕು ಗುತ್ತೀದುರ್ಗ ಪಿರ್ಕಾದ ಅನುವಂಶೀಯ ಶಾನುಭೋಗರಾಗಿ ಸೇವೆ ಸಲ್ಲಿಸಿ 1966 ರಲ್ಲಿ ನಿವೃತ್ತರಾಗಿ, 1990 ರಲ್ಲಿ ನಿಧನರಾದರು.

ನಿವೃತ್ತಿ ವೇತನ ಇರಲಿ ಅವರಿಗೆ ಕೊಡಬೇಕಾದ ಅನುಕಂಪ ಭತ್ಯೆ ಹಾಗೂ ಡಿ.ಸಿ.ಆರ್.ಜಿ. ಹಣ ಪಾವತಿ ಮಾಡಲು ತಹಶೀಲ್ದಾರ್‌ರಲ್ಲಿ  ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, 6 ತಿಂಗಳು ಕಳೆದರೂ ಉತ್ತರವಿಲ್ಲ. ಸಂಬಂಧಿಸಿದ ಮೇಲಾಧಿಕಾರಿಗಳು ಇದರ ಬಗ್ಗೆ ಚಿಂತಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.