ADVERTISEMENT

ಮಾಹಿತಿ ಮತ್ತು ‘ಮಾಯೆ’

​ಪ್ರಜಾವಾಣಿ ವಾರ್ತೆ
Published 28 ಮೇ 2018, 19:30 IST
Last Updated 28 ಮೇ 2018, 19:30 IST

ನಾಗೇಶ ಹೆಗಡೆಯವರ ‘ದೂಳು ಪ್ರಳಯಕ್ಕೆ ಉತ್ತರ ಭಾರತ ತತ್ತರ’ (ವಿಜ್ಞಾನ ವಿಶೇಷ, ಪ್ರ.ವಾ., ಮೇ 17), ನಮಗೆ ಅಷ್ಟಾಗಿ ಗೊತ್ತಿರದಿದ್ದ ‘ದೂಳು ಮಾರಿ’ಯ ಭಯಜನಕ ಮಹಾ ಮಾಹಿತಿಯನ್ನು ಪೂರೈಸಿತು! ಮಾಹಿತಿಯ ಮಾತಿರಲಿ, ಹೆಗಡೆಯವರ ಕಾವ್ಯಾತ್ಮಕ ನಿರೂಪಣೆಯ ‘ಮಾಯೆ’ಗೆ ಯಾರೂ ಮಾರುಹೋಗಬೇಕು.

ಈ ಜಾಗತಿಕ ಪ್ರಾಕೃತಿಕ ಘೋರ ವಿಕೋಪದ ಮುಂದೆ ನರನೊಂದು ಇರುವೆ, ಸ್ವಯಂಕೃತಾಪರಾಧದಿಂದ ಮುಂದೊಮ್ಮೆ ಅಳಿಸಿ ಹೋದೀತು ಅವನ ಇರವೆ! ಸಾಮಾನ್ಯವಾಗಿ ಸ್ವರ್ಗಸದೃಶವಾದ ನಿಸರ್ಗ ‘ನರಕಾಸುರ’ ನಾಗುತ್ತಿರುವ ದುರಂತ ದುಃಖಕರವಲ್ಲವೆ?

–ಸಿ.‍ಪಿ.ಕೆ., ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.