ADVERTISEMENT

ಮುತ್ತು ಉದುರಲಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 19:30 IST
Last Updated 26 ಜೂನ್ 2012, 19:30 IST
ಮುತ್ತು ಉದುರಲಿ
ಮುತ್ತು ಉದುರಲಿ   

ಭುವಿಗೆ ಚುಂಬನ ನೀಡುವ
ಮಳೆ ಹನಿಗಳೆ
ಅದೆಲ್ಲಿ ಅವಿತಿರುವಿರಿ,
ಅದ್ಯಾವಾಗ ಕೆಳಗಿಳಿಯುವಿರಿ
ಇಳೆಗೆ ಬೆಚ್ಚನೆಯ ಸ್ಪರ್ಶವ ನೀಡಿ

ಮನಗಳಿಗೆ ತಂಪೆರಗಿಸಲು
ಅದೆಂದು ಕೆಳಗಿಳಿಯುವಿರಿ
ಹಸಿರಿಗೆ ಉಸಿರಾಗುವಿರಿ
ವರುಷದಲ್ಲೊಮ್ಮೆ ಧರೆಗಿಳಿಯುವ
ಚುಂಬಕ ಮುತ್ತುಗಳೆ
ಚುಂಬಿಸಿ ಬನ್ನಿರಿ
ಬದುಕಿಗೆ ಮುದವ ನೀಡಿರಿ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.