ADVERTISEMENT

ಮೂರ್ತಿ ಪ್ರತಿಷ್ಠಾಪನೆ ಕೈಬಿಡಿ

ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಗದುಗಿನ ತೋಂಟದಾರ್ಯ ಸ್ವಾಮೀಜಿಯವರು ಶಿಕ್ಷಣ ಪ್ರಸಾರ, ದಾಸೋಹ, ಗ್ರಂಥ ಪ್ರಕಟಣೆ, ಸಾಮಾಜಿಕ ಚಟುವಟಿಕೆಗಳ ಮೂಲಕ ವಿಶಿಷ್ಟ ಕೆಲಸ ಮಾಡುತ್ತ ಎಲ್ಲ ಸಮುದಾಯಗಳ ಗೌರವಕ್ಕೆ ಪಾತ್ರವಾಗಿದ್ದಾರೆ.

ಆದರೆ ಗಣಿ ಕುಖ್ಯಾತಿಯ ಶಾಸಕ ಶ್ರೀ ರಾಮುಲು ಜೊತೆಗೂಡಿ ಗದುಗಿನ ಕೆರೆಯನ್ನು ಬತ್ತುವಂತೆ ಮಾಡಿ ಅಲ್ಲಿ ಬಸವಣ್ಣನ ಸ್ಥಾವರಮೂರ್ತಿ ಪ್ರತಿಷ್ಠಾಪಿಸಲು ಹೊರಟಿರುವುದು ಸರಿಯಾದ ಕ್ರಮ ಅಲ್ಲ. ಅವರು ತಕ್ಷಣ ಬಸವಣ್ಣನ ಮೂರ್ತಿ ಸ್ಥಾಪನೆ ಕಾರ್ಯವನ್ನು ನಿಲ್ಲಿಸಿ ಎಂದಿನಂತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮನವಿ.    

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.