ADVERTISEMENT

ಮೂರ್ತಿ ಸ್ಥಾಪನೆ ಸರ್ಕಾರದ ಯೋಜನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ತೋಂಟದಾರ್ಯ ಸ್ವಾಮೀಜಿ ಅವರು  ಮಾಜಿ ಮಂತ್ರಿ ಬಿ. ಶ್ರಿರಾಮುಲು ಅವರ ಸಹಕಾರದಿಂದ ಗದುಗಿನ ಕೆರೆಯ ನೀರನ್ನು ಇಂಗಿಸಿ ಅಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ (ಪ್ರ ವಾ ವಾ ಏ.2)ದಲ್ಲಿ  ಹುರುಳಿಲ್ಲ.

ಶ್ರಿರಾಮುಲು ಗದಗ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದಾಗ ಒಮ್ಮೆ ಶ್ರಿಗಳ ಆಶೀರ್ವಾದ ಪಡೆಯಲು ಮಠಕ್ಕೆ ಬಂದಿದ್ದರು. ಆಗ ಅವರು ಗದುಗಿನ (ಭೀಷ್ಮ)ಕೆರೆಯಲ್ಲಿ ಶಿವನ ಮೂರ್ತಿ ಸ್ಥಾಪಿಸುವುದಾಗಿ ತಿಳಿಸಿದರು.

ಆಗ ಶ್ರೀಗಳು ಹೈದರಾಬಾದ್‌ನ ಹುಸೇನ್ ಸಾಗರದಲ್ಲಿ ಬುದ್ಧನ ಮೂರ್ತಿ ಸ್ಥಾಪಿಸಿದ ಮಾದರಿಯಲ್ಲಿ ಯುಗ ಪುರುಷ ಬಸವೇಶ್ವರರ ಪುತ್ಥಳಿ ಸ್ಥಾಪಿಸಲು ಸಲಹೆ ನೀಡಿದ್ದರಷ್ಟೇ.

ಶ್ರೀರಾಮುಲು ಅಂದಿನ ಮುಖ್ಯಮಂತ್ರಿಗಳ ಹಾಗೂ ಪ್ರವಾಸೋದ್ಯಮ ಸಚಿವರ ನೆರವಿನಿಂದ ಸರ್ಕಾರದಿಂದ 7.63 ಕೋಟಿ ರೂಗಳನ್ನು ಈ ಯೋಜನೆಗೆ ಮಂಜೂರು ಮಾಡಿಸಿದ್ದರು. ಆ ಹಣದಲ್ಲಿ ಕಾಮಗಾರಿ ನಡೆಯುತ್ತಿದೆ. ಇದಕ್ಕೂ ಸ್ವಾಮೀಜಿಯವರಿಗೂ ಸಂಬಂಧ ಇಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.