ADVERTISEMENT

ಮೇವು ಬ್ಯಾಂಕ್‌ ಬೇಕು

ವಿಜಯಕುಮಾರ ಎಮ್, ಬಾದಾಮಿ
Published 9 ಆಗಸ್ಟ್ 2015, 19:30 IST
Last Updated 9 ಆಗಸ್ಟ್ 2015, 19:30 IST

ರಾಜ್ಯದಲ್ಲಿ ಮಳೆ ಅಭಾವದಿಂದ 103 ತಾಲ್ಲೂಕುಗಳಲ್ಲಿ ಬರದ ಛಾಯೆ ಮೂಡಿದೆ. ಇದರಿಂದ ರೈತರಿಗಷ್ಟೇ ಅಲ್ಲ ಜಾನುವಾರುಗಳಿಗೂ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿ 275 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿವೆ. ಕೆಲವು ಪ್ರದೇಶಗಳಲ್ಲಿ ಮಳೆಯೇ ಆಗದೆ  ಮೇವಿನ ಸಮಸ್ಯೆ ಉಲ್ಬಣವಾಗಿದೆ.

ಒಣಬೇಸಾಯವನ್ನು ಅವಲಂಬಿಸಿರುವವರು ಭಾರೀ ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಬರದ ಸಿದ್ಧತೆ ಬಗ್ಗೆ ಗಮನಹರಿಸಿ, ಶೀಘ್ರವೇ ಜಾನುವಾರುಗಳಿಗೆ ಗೋಶಾಲೆ ನಿರ್ಮಿಸಬೇಕು. ಮೇವಿನ ಬ್ಯಾಂಕ್ ಮತ್ತು ಬರ ಪೀಡಿತ ಪ್ರದೇಶಗಳಿಗೆ ಪರಿಹಾರ ಘೋಷಣೆ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.