ADVERTISEMENT

ಯಾತನಾಮಯ ಪಯಣ

ನಾಗಲಿಂಗಮೂರ್ತಿ ಬಿ.ಪಿ., ಬೆಂಗಳೂರು
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ನಾನು, ನನ್ನ ಮಡದಿ ಹಾಗೂ ಮಗನೊಂದಿಗೆ ಡಿ.19ರಂದು ದಾವಣಗೆರೆಯಿಂದ ಬೆಂಗಳೂರಿಗೆ ಸಂಜೆ 4-07ರ ಜನ ಶತಾಬ್ಧಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದೆವು. (ಸೀಟು ಸಂಖ್ಯೆ ಡಿ 6 - 37, 38, 41) ನಮ್ಮ ಪ್ರಯಾಣ ಯಾತನಾಮಯವಾಗಿತ್ತು.

ಏಕೆಂದರೆ ಸೀಟುಗಳು ಅತ್ಯಂತ ದುಃಸ್ಥಿತಿಗೆ ಈಡಾಗಿದ್ದವು. ಸ್ಥಿರವಾಗಿ ಕೂರಲೇ ಆಗದೆ ಜಾರುವಂತಾಗುತ್ತಿತ್ತು. ಕೈಯನ್ನು ಇಡುವ ಆಧಾರವು ಕೆಳಕ್ಕೆ ಕುಸಿದು ಬೀಳುತ್ತಿತ್ತು. ಕಿಟಕಿಯ ಗಾಜನ್ನು ಸರಿಸಲು ಸುಲಭದಲ್ಲಿ ಆಗುತ್ತಿರಲಿಲ್ಲ. ಸೀಟುಗಳ ವ್ಯವಸ್ಥೆ ಅತ್ಯಂತ ಕಿಷ್ಕಿಂಧವಾಗಿದ್ದು ಸ್ಥೂಲಕಾಯರಿಗಂತೂ ಭಲೇ ಅವಸ್ಥೆಯಾಗುವಂತಿದೆ. ರೈಲ್ವೆ ಇಲಾಖೆಯು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆಯೆಂದು ನಂಬಬಹುದೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.