ADVERTISEMENT

ಯಾರು ಹೇಳಿದ್ದು ಸತ್ಯ?

ಸಾಮಗ ದತ್ತಾತ್ರಿ
Published 14 ಜೂನ್ 2018, 19:30 IST
Last Updated 14 ಜೂನ್ 2018, 19:30 IST

‘ವಿಧಾನಸೌಧದಲ್ಲಿ ಭ್ರಷ್ಟಾಚಾರ ನನ್ನ ಕಣ್ಣಿಗೆ ಬಿದ್ದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ವರದಿಯಾಗಿದೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮಂತ್ರಿಮಂಡಲದಲ್ಲಿದ್ದ, ಮತ್ತು ಈಗಲೂ ಮಂತ್ರಿಯಾಗಿರುವ ಕೃಷ್ಣ ಬೈರೇಗೌಡರು, ‘ಯಾರೂ 24 ಕ್ಯಾರಟ್ ಅಪರಂಜಿಗಳಲ್ಲ, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭ್ರಷ್ಟಾಚಾರಿಗಳೇ’ ಎಂದಿದ್ದೂ ವರದಿಯಾಗಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಭ್ರಷ್ಟರು ಇರಲಿಲ್ಲವೇ ಅಥವಾ ಅವರಿಗೆ ಆ ಬಗ್ಗೆ ಮಾಹಿತಿಯೇ ಇರಲಿಲ್ಲವೇ.

ಭ್ರಷ್ಟಾಚಾರ ಗುಪ್ತಗಾಮಿನಿಯಾಗಿ ಹರಿಯುವುದಿಲ್ಲ. ಅದು ಸರ್ವವ್ಯಾಪಿ ಮತ್ತು ಢಾಳಾಗಿ ವಿಜೃಂಭಿಸುತ್ತಿದೆ. ಕಾಣುವ ಕಣ್ಣು, ಶಿಕ್ಷಿಸುವ ದೃಢ ಮನಸ್ಸು ಇದ್ದಿದ್ದರೆ ಈ ಹೊತ್ತಿಗೆ ಆಡಳಿತ ಅದೆಷ್ಟೋ ಪಾಲು ಸುಗಮವಾಗಿರುತ್ತಿತ್ತು. ಜನರು ಇಂಥ ಅದೃಷ್ಟವನ್ನು ಪಡೆದುಕೊಂಡು ಬಂದಿಲ್ಲವೇನೋ! ಹೀಗಾಗಿ ಭ್ರಷ್ಟರು ಬೆಳೆದಿದ್ದಾರೆ, ಶಿಕ್ಷಿಸುವವರು ಕೈಲಾಗದವರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.