ADVERTISEMENT

ಯಾವುದು ಮಾರಕ?

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 19:30 IST
Last Updated 27 ಫೆಬ್ರುವರಿ 2018, 19:30 IST

‘ಅತಿ ಸಂಸ್ಕರಿತ ಆಹಾರಕ್ಕೂ ಕ್ಯಾನ್ಸರ್‌ಗೂ ಇದೆ ನಂಟು’ ಎಂದು ಅಧ್ಯಯನವೊಂದು ದೃಢಪಡಿಸಿರುವುದು ವರದಿಯಾಗಿದೆ (ಪ್ರ.ವಾ., ಫೆ. 18).

ವಿವಿಧ ರಾಷ್ಟ್ರಗಳ ವಿಜ್ಞಾನಿಗಳು ಸಂಶೋಧನೆ ನಡೆಸಿ, ಸಂಸ್ಕರಿತ ಬನ್‌, ಪಿಜ್ಜಾ, ಕೇಕ್‌, ಕುರುಕಲು ತಿಂಡಿ ಇತ್ಯಾದಿ ಖಾದ್ಯಗಳು ರೋಗಕ್ಕೆ ಕಾರಣವಾಗುತ್ತವೆ
ಎಂದು ಹೇಳುತ್ತಲೇ ಇದ್ದಾರೆ. ಮಕ್ಕಳು ಇಷ್ಟಪಟ್ಟು ಇಂಥ ಖಾದ್ಯಗಳನ್ನೇ ಕೇಳುತ್ತಾರೆ. ಪೋಷಕರು ಅವುಗಳನ್ನು ಕೊಡಿಸುವ ಪ್ರವೃತ್ತಿಯನ್ನೂ ರೂಢಿಸಿಕೊಂಡಿದ್ದಾರೆ. ಆರೋಗ್ಯಕ್ಕೆ ಪೂರಕವಾದ ರೊಟ್ಟಿ, ತುಪ್ಪ, ದೋಸೆ, ಚಟ್ನಿ ಹೆಸರುಗಳು ಇಂದಿನ ಮಕ್ಕಳ ಬಾಯಲ್ಲಿ ಬರುವುದೇ ಇಲ್ಲ.

ಅಪಾಯಕಾರಿ ತಿನಿಸುಗಳ ಮಾರಾಟವನ್ನು ನಿಷೇಧಿಸಬೇಕಾಗಿರುವ ಸರ್ಕಾರಗಳು ‘ಅಡಿಕೆಯಿಂದ ಕ್ಯಾನ್ಸರ್‌ ಬರುತ್ತದೆ’ ಎಂದು ಹೇಳುತ್ತಿವೆ. ಇಂಥ ಅವೈಜ್ಞಾನಿಕಹೇಳಿಕೆ ನೀಡುವ ಬದಲು, ಯಾವುದು ಮಾರಕ, ಯಾವುದು ಒಳ್ಳೆಯದು ಎಂದು ವೈಜ್ಞಾನಿಕವಾಗಿ ತೀರ್ಮಾನಿಸಲಿ.

ADVERTISEMENT

ಸುಶೀಲಮ್ಮ ವಿ., ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.