ADVERTISEMENT

ರಜೆ ಕಡ್ಡಾಯಗೊಳಿಸಿ

ದಿನೇಶ್‌ ಕೆ.ಕಾರ್ಯಪ್ಪ
Published 8 ಸೆಪ್ಟೆಂಬರ್ 2017, 19:30 IST
Last Updated 8 ಸೆಪ್ಟೆಂಬರ್ 2017, 19:30 IST

ಪೊಲೀಸರಿಗೆ ವಾರದ ರಜೆ ಕೊಡುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ನೀಡಿದ್ದರೂ, ಅವರಿಗೆ ರಜೆ ಸಿಗುತ್ತಿಲ್ಲ ಎಂಬ ವರದಿ (ಪ್ರ.ವಾ., ಸೆ.4) ಕಳವಳಕಾರಿಯಾಗಿದೆ.

ಪೊಲೀಸರು ವಾರದ ರಜೆಯಿಂದ ವಂಚಿತರಾಗಿರುವ ಬಗ್ಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಅಸಮಾಧಾನ ವ್ಯಕ್ತಪಡಿಸಿರುವ ಕ್ರಮ ಸಮಂಜಸವಾಗಿದೆ. ಮಹತ್ವದ
ಪ್ರಕರಣಗಳನ್ನು ಭೇದಿಸುವಲ್ಲಿ ರಾಜ್ಯದ ಪೊಲೀಸರು ನಿಸ್ಸೀಮರು. ಸದಾ ಒತ್ತಡದ ನಡುವೆಯೇ ಕಾರ್ಯನಿರ್ವಹಿಸಿ ಕಾನೂನು ಪಾಲನೆಗೆ ಆದ್ಯತೆ ನೀಡುವ ಪೊಲೀಸರಿಗೆ ವಿಶ್ರಾಂತಿ ನೀಡುವುದೂ ಅಗತ್ಯ. ರಜಾ ದಿನದಲ್ಲಿ ಕರ್ತವ್ಯ ನಿರ್ವಹಿಸಿದ್ದಕ್ಕೆ ಪ್ರತಿಯಾಗಿ ಸಿಗಬೇಕಾದ ಭತ್ಯೆಯೂ ದೊರೆಯದಿದ್ದರೆ ಹೇಗೆ?

ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಕೆಲಸದ ಒತ್ತಡಹೆಚ್ಚಾಗಿರುವ ಕಾರಣ ಪೊಲೀಸರಿಗೆ ರಜೆ ಸಿಗುತ್ತಿಲ್ಲ ಎಂಬ ತರ್ಕ ಸರಿಯಲ್ಲ. ಸಿಬ್ಬಂದಿ ಕೊರತೆ ಇದ್ದರೆ ಹೊಸಬರ ನೇಮಕ ಮಾಡಿ ನಿರುದ್ಯೋಗ ಸಮಸ್ಯೆ ನಿವಾರಿಸಬಾರದೇಕೆ? ಗೃಹಸಚಿವರು ಗಮನ ಹರಿಸುವರೇ!?

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.