
ಕರ್ನಾಟಕ ಸರ್ಕಾರವು ಪ್ರತಿ ತಿಂಗಳ 2ನೇ ಶನಿವಾರ ತನ್ನ ಎಲ್ಲಾ ಕಾರ್ಯಾಲಯಗಳಿಗೆ ರಜೆಯ ದಿನವನ್ನಾಗಿ ಘೋಷಿಸಿದೆ. ಇದರಿಂದ ಸರ್ಕಾರಿ ಅಧಿಕಾರಿಗಳು ರಜೆಯ ಮಜವನ್ನು ಅನುಭವಿಸುತ್ತಾರೆಯೇ ಹೊರತು ಸಾರ್ವಜನಿಕರಿಗೆ ಯಾವ ರೀತಿಯಿಂದಲೂ ಉಪಯೋಗವಿರುವುದಿಲ್ಲ.
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸಾಕಷ್ಟು ತ್ವರಿತಗತಿಯಲ್ಲಿ ನಡೆಯುತ್ತಿಲ್ಲ .ಬಹಳ ವಿಳಂಬ ನೀತಿ ಇದೆ. 1 ವರ್ಷಕ್ಕೆ 12 ದಿವಸಗಳ ಎರಡನೇ ಶನಿವಾರದ ರಜೆಯಿಂದ ವ್ಯರ್ಥ ಕಾಲಹರಣವಾಗುತ್ತಿದೆ.
ಈ ವಿಚಾರದಲ್ಲಿ ಸರ್ಕಾರ ಈ 2ನೇ ಶನಿವಾರ ದಿನವನ್ನು ಕೆಲಸದ ದಿನವೆಂದು ಪರಿಗಣಿಸಿ, ಕಡತಯಜ್ಞ/ಕುಂದುಕೊರತೆಗಳ ಬಗ್ಗೆ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಇಲಾಖೆಗಳ ಅಧಿಕಾರಿಗಳು ಸ್ಪಂದಿಸಬಹುದಾಗಿದೆ.
-ಎಂ. ಕೆ. ನಂಜುಂಡರಾವ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.