ADVERTISEMENT

ರಾಜಕೀಯಕ್ಕೆ ನೈತಿಕ ಸವಾಲು?!

ಆರ್.ಕೆ.ದಿವಾಕರ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

`ಧೈರ‌್ಯವಿದ್ದರೆ ವರದಿ ತಿರಸ್ಕರಿಸಿ; ಹೆಗ್ಡೆಸವಾಲು~ (ಪ್ರ. ವಾ. ಅ. 15) ವರದಿ ಓದಿ ಅವಕ್ಕಾದೆ.ಸದ್ಯ ಸಿಕ್ಕಿರುವ ಸದವಕಾಶ ಉಪಯೋಗಿಸಿಕೊಂಡು ತೂಗುಕತ್ತಿಯಿಂದ ತಪ್ಪಿಸಿಕೊಳ್ಳಲು ತಾಕಲಾಡುತ್ತಿರುವ ಸರ್ಕಾರ, ನ್ಯಾ. ಸಂತೋಷ್ ಹೆಗ್ಡೆಯವರ ನೈತಿಕ ಸವಾಲು ಸ್ವೀಕರಿಸುವುದಾದರೂ ಉಂಟೇ?!ಇಷ್ಟಕ್ಕೂ ಸರ್ಕಾರವೆನ್ನುವುದೇನು? ರಾಜಕೀಯಸ್ಥರ ಒಂದು ಗುಂಪು.

ರಾಜಕೀಯವೆನ್ನುವುದೇ ಸುಳ್ಳು-ತಟವಟಗಳ ಇನ್ನೊಂದು ಹೆಸರು. ಜಟಿಲ ಕಾನೂನುಗಳನ್ನೂ, ಅತ್ಯುನ್ನತ ಅಂಪೈರುಗಳನ್ನೂ ಮಣ್ಣುಮುಕ್ಕಿಸುವುದೇ ಅದರ ಆಟದ ಪರಿಯಲ್ಲವೇ?

ಮಂತ್ರಿಮಹೋದಯರುಗಳೂ ಸರ್ಕಾರದ ನೌಕರರು ಎಂಬ ಕಟ್ಟಳೆಯಡಿ ಅವರುಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಶಿಫಾರಸು ಆದರೆ ಮುಖ್ಯಮಂತ್ರಿ ಮತ್ತು ಮಂತ್ರಿಗಳು ಸರ್ಕಾರಿ ನೌಕರರೆನ್ನುವುದರಲ್ಲೇ ದೋಷ ಅಡಗಿದೆ.

ಐಎಎಸ್, ಐಪಿಎಸ್‌ಗಳಿರಲಿ ಎರಡನೆ ದರ್ಜೆ ಗುಮಾಸ್ತನಿಗೂ ಕನಿಷ್ಠ ವಿದ್ಯಾರ್ಹತೆ ನಿಗದಿಯಾಗಿರುತ್ತದೆ; ಇಲಾಖೆ ಪರೀಕ್ಷೆ ಬರೆದು ಬಡ್ತಿ ಪಡೆಯುತ್ತಾರೆ; ಪರಿಣತಿ ಬೇಡ, ಅಕ್ಷರಜ್ಞಾವೂ ಇರಲಾರದವರು ಇದ್ದಕ್ಕಿದಂತೆ ಇವರೆಲ್ಲರ  `ಬಾಸ್~ ಆಗಿಬಿಡುವುದು ಹಾಸ್ಯಾಸ್ಪದವಲ್ಲವೇ?

ಚುನಾಯಿತ ಸದಸ್ಯರು ಆಡಳಿತದ ಮುಖ್ಯಸ್ಥರಾಗಬೇಕು, ನಿಜ. ಆದರೆ ನೌಕರಶಾಹೀ ಅರ್ಥದಲ್ಲಲ್ಲ, ನೈತಿಕ ಅರ್ಥದಲ್ಲಿ.

ಈಗಂತು ಇವರದು ದೋಚುವ-ಬಾಚುವ ದರ್ಬಾರು!  `ನಾಳೆ ಯಾರೋ, ನಾವ್ಯಾರೋ ಸಿಕ್ಕಾಗ, ಸಿಕ್ಕಷ್ಟೂ ಹೊಡೆದು ಜಾಗ ಖಾಲಿ ಮಾಡು~ ಎಂಬುದೇ ಧ್ಯೇಯವಾಕ್ಯ! ಇದೇ ದುರಂತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT