ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ ಅವರ ಹಂತಕರ ಕುರಿತು ಕರುಣೆ ತೋರುವವರೂ (ಪ್ರ.ವಾ. ಆ. 29) ಇದ್ದಾರೆ. ಇನ್ನೊಂದು ಕಡೆ ರಾಷ್ಟ್ರ ರಕ್ಷಣೆ ಕುರಿತಂತೆ ಪ್ರಧಾನಿ ಹುದ್ದೆಯನ್ನು ಲೋಕಪಾಲ್ ಮಸೂದೆಯಿಂದ ದೂರ ಇಡಬೇಕು ಎನ್ನುವವರೂ ಇದ್ದಾರೆ.
ಈಗಿನ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೆಲ್ಲ ವಿಚಿತ್ರ ವಿದ್ಯಮಾನಗಳು ನಡೆಯುತ್ತಲೇ ಇವೆ. ದಿ. ರಾಜೀವ್‌ಗಾಂಧಿ ಹಂತಕರಿಗೆ ವಿಧಿಸಿರು ಶಿಕ್ಷೆಯನ್ನು ಈ ಹಂತದಲ್ಲಿ ಪ್ರಶ್ನಿಸುವುದಾಗಲಿ, ಸೋನಿಯಾ ಗಾಂಧಿಯವರನ್ನು ಸಂಪರ್ಕಿಸುವುದಾಗಲಿ ಸರ್ವಥಾ ಸಲ್ಲದು.
ಆಗಿನ ಪ್ರಧಾನಿ ರಾಜೀವಗಾಂಧಿ ಅವರ ಹತ್ಯೆಯ ಮರುದಿನ ರಾತ್ರಿ ಶ್ರೀ ಪೆರಂಬುದೂರಿಗೆ ಅಕಸ್ಮಾತ್ ಭೇಟಿ ನೀಡಿ ಕಣ್ಣೀರು ಹಾಕಿದ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬ! ಇಪ್ಪತ್ತು ವರ್ಷ ಕಳೆಯಿತು. ಇನ್ನು ವೃಥಾ ಕಾಲಹರಣ ಕೂಡದು.
-
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.